ನ.2ರಂದು ಗೋಸ್ವಾಲ್ ಕಿರಣ್ ಪ್ರಶಸ್ತಿ ಪ್ರದಾನ

Update: 2021-10-27 13:28 GMT

ಉಡುಪಿ, ಅ.27: ವಿಶ್ವ ಆಯುರ್ವೇದ ಪರಿಷತ್ ಮೈತ್ರೇಯ ಆಯುರ್ವೇದ ಆಶ್ರಮದ ವತಿಯಿಂದ ಸಮುದ್ರ ಮಂಥನ ಮಹೋತ್ಸವ-2021 ಪ್ರಯುಕ್ತ ಗೋಸ್ವಾಲ್ ಕಿರಣ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನ.2ರಂದು ತೆಕ್ಕಟ್ಟೆಯ ಗೋಸ್ವಾಲ್ ಮೈತ್ರೇಯ ಆಯುರ್ವೇದ ಆಶ್ರಮದಲ್ಲಿ ಆಯೋಜಿಸಲಾಗಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೋಸ್ವಾಲ್ ಸಲಹೆಗಾರ ಡಾ.ಉದಯ ಶಂಕರ್ ಮಾತನಾಡಿ, ಪ್ರಶಸ್ತಿಗೆ ಕಾರ್ಡಿಯೋಲಜಿಸ್ಟ್ ಪದ್ಮ ಭೂಷಣ ಡಾ.ಬಿ.ಎಂ.ಹೆಗ್ಡೆ, ಅಖಿಲ ಭಾರತ ಆಯುರ್ವೇದ ಇಸ್ಟಿಟ್ಯೂಟ್ ಇದರ ಪ್ರೊಫೆಸರ್ ಪಿ.ಕೆ.ಪ್ರಜಾಪತಿ, ರಾಷ್ಯ ದೇಶದ ಮಾಸ್ಕೋ ಸಿಟಿಯ ಡೆಪ್ಯುಟಿ ಡೈರೆಕ್ಟರ್ ಓಲ್ಗ ವಿಕ್ಟೋರೊವ್ನ ಶರಪೋವಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಸಂಜೆ 4.30ಕ್ಕೆ ಪ್ರಶಸ್ತಿಯನ್ನು ಡಾ.ಶೇಷಾದ್ರಿ ಚಾರಿ ಪ್ರದಾನ ಮಾಡಲಿದ್ದಾರೆ. ಸಂಜೆ 6.15ಕ್ಕೆ ಮಣಿಪಾಲದ ವಿದುಷಿ ಉಮಾಶಂಕರಿ ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮ ಆನ್‌ಲೈನ್‌ನಲ್ಲೂ ಪ್ರಸಾರ ವಾಗಲಿದೆ ಎಂದು ಅವರು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಡಾ.ತನ್ಮಯ ಗೋಸ್ವಾಮಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News