ಅ.31ರಂದು ಲೇಕೋ ಬ್ಯಾಂಕಿನ ವಜ್ರಮಹೋತ್ಸವ ಕಟ್ಟಡ ಉದ್ಘಾಟನೆ

Update: 2021-10-27 13:32 GMT

ಉಡುಪಿ, ಅ.27: ಉಡುಪಿ ಎಲ್‌ಐಸಿ ಎಂಪ್ಲಾಯೀಸ್ ಕೋ-ಆಪರೇಟಿವ್ ಬ್ಯಾಂಕಿನ ವಜ್ರಮಹೋತ್ಸವ ಕಟ್ಟಡದ ಉದ್ಘಾಟನೆಯು ಅ.31ರ ಬೆಳಗ್ಗೆ 10.30ಕ್ಕೆ ಬ್ಯಾಂಕ್ ಕಟ್ಟಡ ಆವರಣದಲ್ಲಿ ನಡೆಯಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ಕೆ.ಕೃಷ್ಣ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಟ್ಟಡವನ್ನು ಎಲ್‌ಐಸಿ ಉಡುಪಿ ವಿಭಾಗೀಯ ಕಚೇರಿಯ ಹಿರಿಯ ವಿಭಾಗಾಧಿಕಾರಿ ಬಿಂದು ರೋಬರ್ಟ್, ಸಭಾಂಗಣವನ್ನು ಸಹಕಾರಿ ಸಂಘಗಳ ಪ್ರವೀಣ್ ಬಿ.ನಾಯಕ್ ಉದ್ಘಾಟಿಸಲಿರುವರು ಎಂದರು.

1977ರಲ್ಲಿ ಸ್ಥಾಪನೆಯಾದ ಈ ಬ್ಯಾಂಕ್ 1982ರಲ್ಲಿ ಆರ್‌ಬಿಐಯಿಂದ ಬ್ಯಾಂಕಿಂಗ್ ಲೈಸೆನ್ಸ್ ಪಡೆಯಲು ಸಫಲವಾಗಿದೆ. 25 ಸದಸ್ಯರು 1010 ಷೇರು ಬಂಡವಾಳದೊಂದಿಗೆ ಪ್ರಾರಂಭವಾದ ಬ್ಯಾಂಕ್ ಇಂದು 6.28 ಕೋ. ಶೇರು ಬಂಡವಾಳ ಹೊಂದಿದೆ. ಕಳೆದ ವರ್ಷ ಬ್ಯಾಂಕಿನ ಠೇವಣಿ 120.83 ಕೋ.ರೂ. ಹಾಗೂ ಮುಂಗಡ ಸಾಲ 71.92 ಕೋ.ರೂ ಆಗಿದೆ. ಕಳೆದ ವರ್ಷಾಂತ್ಯಕ್ಕೆ ಬ್ಯಾಂಕ್ 142.90 ಕೋ.ರೂ. ವ್ಯವಹಾರ ನಡೆಸಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಎಲ್‌ಐಸಿ ಎಂಪ್ಲಾಯೀಸ್ ಕೋಆರಪರೇಟಿವ್ ಬ್ಯಾಂಕ್ ನಿರ್ದೇಶಕರಾದ ಕೆ.ಶಿವಪ್ರಸಾದ್, ಉಪೇಂದ್ರ ಪೈ, ಮುಖ್ಯ ಕಾರ್ಯನಿರ್ವ ಣಾಧಿಕಾರಿ ಶಶಿಕಲಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News