ಉಡುಪಿ ನಗರದ ಜೆವಿಕ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ; ಕೇಂದ್ರ ಇಂಧನ ಮಂತ್ರಾಲಯದ ತಜ್ಞರೊಂದಿಗೆ ಸಮಾಲೋಚನೆ

Update: 2021-10-27 13:49 GMT

ಉಡುಪಿ, ಅ.27: ಕೇಂದ್ರ ಸರಕಾರದ ನವೀಕರಿಸಬಹುದಾದ ಇಂಧನ ಮಂತ್ರಾಲಯದ ತಜ್ಞರು ಬುಧವಾರ ಉಡುಪಿ ನಗರಸಭೆಗೆ ಸಂಬಂಧಿಸಿದ ಕರ್ವಾಲು ತ್ಯಾಜ್ಯ ವಿಲೇವಾರಿ ಘಟಕಕೆ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಜ್ಞರಾದ ಲೋಕೇಂದ್ರ ಜೋಶಿ ಮತ್ತು ರಾಜೇಶ್ ಅಯ್ಯಪ್ಪ ಸೂರ್, ಶಾಸಕ ಕೆ ರಘುಪತಿ ಭಟ್, ನಗರಸಭಾ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ್, ಪೌರಾಯುಕ್ತ ಡಾ.ಉದಯ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್ ಹಾಗೂ ಪರಿಸರ ಇಂಜಿನಿಯರ್ ಸ್ನೇಹಾ ಕೆ.ಎಸ್. ಅವರೊಂದಿಗೆ ಈ ಕುರಿತು ಸಮಾಲೋಚನೆ ನಡೆಸಿದರು.

ಈ ಘಟಕದಲ್ಲಿ ಪ್ರತಿದಿನ ಅಂದಾಜು 50 ಟನ್ ಜೈವಿಕ ತ್ಯಾಜ್ಯ ಲಭಿಸುವ ಬಗ್ಗೆ ಮಾಹಿತಿ ಇದ್ದು, ಅದರನ್ವಯ ಪ್ರತಿದಿನ ಸುಮಾರು 3000 ಯುನಿಟ್ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದೆ. ಈ ಕುರಿತು ಯೋಜನಾ ವರದಿ ಯನ್ನು ಸಿದ್ಧಪಡಿಸಿ ಕಳುಹಿಸುವ ಬಗ್ಗೆ ತಜ್ಞರಾದ ಲೋಕೇಂದ್ರ ಜೋಶಿ, ರಾಜೇಶ್ ಅಯ್ಯಪ್ಪ ಸೂರ್ ಸೂಚನೆ ನೀಡಿದರು.

ಉಡುಪಿ ನಗರದಲ್ಲಿ ನಿತ್ಯ ಲಭಿಸುವ ಜೈವಿಕ ತ್ಯಾಜ್ಯ ಬಳಸಿ ವಿದ್ಯುತ್ ತಯಾರಿ ಸಾಧ್ಯವಿದ್ದು ಕೇಂದ್ರ ಸರ್ಕಾರವೂ ಇದಕ್ಕೆ ವಿಶೇಷ ಉತ್ತೇಜನ ನೀಡುತ್ತಿದೆ. ಕೇಂದ್ರದ ಸಹಯೋಗವನ್ನು ಪಡೆದು ಜೈವಿಕ ವಿದ್ಯುತ್ ಸ್ಥಾವರ ಸ್ಥಾಪಸಿದಲ್ಲಿ ಉಡುಪಿಯ ಜನತೆಗೆ ಬಹಳ ಉಪಯೋವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ನಗರಸಭಾ ಸಿಬಂದಿ ಸುರೇಂದ್ರ, ಸಾಮಾಜಿಕ ಕಾರ್ಯ ಕರ್ತ ವಾಸುದೇವ ಭಟ್ ಪೆರಂಪಳ್ಳಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News