ಮೂಡುಬಿದಿರೆ: ಮೂವರು ಮಕ್ಕಳ ಸಹಿತ ತಾಯಿ ನಾಪತ್ತೆ

Update: 2021-10-27 15:22 GMT

ಮಂಗಳೂರು, ಅ.27: ಮೂಡುಬಿದಿರೆ ತಾಲೂಕಿನ ಮಾರ್ಪಾಡಿ ಗ್ರಾಮದ ಸುಮನ ಆಚಾರ್ಯ (39) ಎಂಬವರು ತನ್ನ ಮೂವರು ಅಪ್ರಾಪ್ತ ಮಕ್ಕಳೊಂದಿಗೆ ಅ.19ರಿಂದ ನಾಪತ್ತೆಯಾಗಿದ್ದು, ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

4.5 ಅಡಿ ಎತ್ತರದ, ಗೋಧಿ ಮೈಬಣ್ಣ ದ ಸಾಧಾರಣ ಮೈಕಟ್ಟಿನ, ದುಂಡು ಮುಖದ ಮಹಿಳೆಯ ಎಡಗೈಯಲ್ಲಿ ಎಸ್‌ಪಿಎ ಎಂಬ ಹಚ್ಚೆ ಇದೆ. ಕಾಣೆಯಾದ ವೇಳೆ ಕಪ್ಪುಚೂಡಿದಾರ ಧರಿಸಿದ್ದರು. ಕನ್ನಡ ಮತ್ತು ತುಳು ಭಾಷೆ ಮಾತನಾಡುತ್ತಾರೆ.

ಈ ಚಹರೆಯುಳ್ಳ ಮಹಿಳೆಯ ಪತ್ತೆಯಾದಲ್ಲಿ ದೂ.ಸಂ: 08258-236333, 0824-2220526 ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News