1ರಿಂದ 5ನೇ ತರಗತಿ: ಉಡುಪಿ ಜಿಲ್ಲೆಯಲ್ಲಿ ಶೇ.82ರಷ್ಟು ಹಾಜರಾತಿ

Update: 2021-10-27 15:44 GMT

ಉಡುಪಿ, ಅ.28: ಒಂದೂವರೆ ವರ್ಷದ ಬಳಿಕ ಕಳೆದ ಸೋಮವಾರ ರಾಜ್ಯಾದ್ಯಂತ ಪ್ರಾರಂಭಗೊಂಡ ಪ್ರಾಥಮಿಕ ಶಾಲೆಯ ಒಂದರಿಂದ ಐದನೇ ತರಗತಿಗೆ ಉಡುಪಿ ಜಿಲ್ಲೆಯಲ್ಲಿ ಶೇ.82ರಷ್ಟು ಮಕ್ಕಳು ಹಾಜರಾಗುತ್ತಿದ್ದಾರೆ. ಅನುದಾನ ರಹಿತ ಶಾಲೆಗಳಲ್ಲಿ ಈ ಸಂಖ್ಯೆ ಶೇ.68ರಷ್ಟಿದೆ ಎಂದು ಉಡುಪಿ ಜಿಲ್ಲಾ ಪ್ರಾಥಮಿಕ ಶಿಕ್ಷಣ ಇಲಾಖೆಯ ಉಪನಿದೇಶರ್ಕ ಎನ್.ಎಚ್.ನಾಗೂರ ತಿಳಿಸಿದ್ದಾರೆ.

ಪ್ರತಿದಿನ ಶಾಲೆಗೆ ಆಗಮಿಸುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ. ಶಾಲೆಗೆ ಬರಲು ಮಕ್ಕಳಲ್ಲಿ ಅತಿ ಉತ್ಸಾಹವೂ ಕಾಣಿಸುತ್ತಿದೆ. ಈಗ ಅರ್ಧ ದಿನ ಮಾತ್ರ ತರಗತಿಗಳು ನಡೆಯುತಿದ್ದು, ನ.2ರಿಂದ ಇಡೀ ದಿನ ಕ್ಲಾಸ್‌ಗಳನ್ನು ನಡೆಸಲು ಸರಕಾರದಿಂದ ಆದೇಶ ಬಂದಿದೆ ಎಂದರು.

ಬುಧವಾರದಂದು ಉಡುಪಿ ಜಿಲ್ಲೆಯ ಸರಕಾರಿ ಶಾಲೆಗಳ ಶೇಕಡಾವಾರು ಹಾಜರಾತಿ ಹೀಗಿದೆ. ಒಂದನೇ ತರಗತಿ ಶೇ.80, ಎರಡನೇ ತರಗತಿ ಶೇ.82, ಮೂರನೇ ತರಗತಿ ಶೇ.81, ನಾಲ್ಕನೇ ತರಗತಿ ಶೇ.82 ಹಾಗೂ ಐದನೇ ತರಗತಿ ಶೇ.84ರಷ್ಟು ಮಕ್ಕಳು ಹಾಜರಾಗಿದ್ದಾರೆ.

ಅನುದಾನಿತ ಶಾಲೆಗಳಲ್ಲಿ ಒಂದನೇ ತರಗತಿಗೆ ಶೇ.80, ಎರಡನೇ ತರಗತಿಗೆ ಶೇ.80, ಮೂರನೇ ತರಗತಿಗೆ ಶೇ.80, ನಾಲ್ಕನೇ ತರಗತಿಗೆ ಶೇ.82 ಹಾಗೂ ಐದನೇ ತರಗತಿಗೆ ಶೇ.83ರಷ್ಟು ಮಕ್ಕಳು ಹಾಜರಾಗಿದ್ದಾರೆ.

ಅನುದಾನ ರಹಿತ ಶಾಲೆಗಳಲ್ಲಿ ಒಂದನೇ ತರಗತಿಗೆ ಶೇ.67, ಎರಡನೇ ತರಗತಿಗೆ ಶೇ.64, ಮೂರನೇ ತರಗತಿಗೆ ಶೇ.67, ನಾಲ್ಕನೇ ತರಗತಿಗೆ ಶೇ.68 ಹಾಗೂ ಐದನೇ ತರಗತಿಗೆ ಶೇ.70ರಷ್ಟು ಮಕ್ಕಳು ಇಂದು ಹಾಜರಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News