ಮಲ್ಪೆ: ಅ.28ರಂದು ಸಮುದ್ರ ಮಧ್ಯೆ ಬೋಟಿನಲ್ಲಿ ಕನ್ನಡ ಗೀತಗಾಯನ

Update: 2021-10-27 15:49 GMT

ಉಡುಪಿ, ಅ.27: ರಾಷ್ಟ್ರಕವಿ ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಮವ’ ಹಾಡು ಅ.28ರಂದು ಬೆಳಗ್ಗೆ 11 ಗಂಟೆಗೆ ಮಲ್ಪೆ ಬಳಿ ಅರಬಿಸಮುದ್ರದ ಮಧ್ಯೆ ತೇಲುವ ಬೋಟಿನಲ್ಲಿ 100 ಮಂದಿ ಕಲಾವಿದರಿಂದ ಮೊಳಗಲಿದೆ. ಸಮುದ್ರದ ಜಲಚರಗಳೊಂದಿಗೆ ಸಮುದ್ರದಲ್ಲಿ ಮೀನು ಹಿಡಿಯುವ ಮೀನುಗಾರರು ಇದಕ್ಕೆ ಸಾಕ್ಷಿಯಾಗಲಿದ್ದಾರೆ.

ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣ ಹಾಗೂ ವೈಶಿಷ್ಠ ಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಅ.28ರಂದು ಬೆಳಗ್ಗೆ 11 ಗಂಟೆಗೆ ರಾಜ್ಯಾದ್ಯಂತ ಏಕಕಾಲದಲ್ಲಿ ಕನ್ನಡದ ಶ್ರೇಷ್ಠತೆಯನ್ನು ಸಾರುವ ‘1.ಬಾರಿಸು ಕನ್ನಡ ಡಿಂಡಿಮವ, 2.ಜೋಗದ ಸಿರಿ ಬೆಳಕಿನಲ್ಲಿ, 3.ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಈ ಗೀತೆಗಳ ನಾಡಗೀತೆಯೊಂದಿಗೆ ಹಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣ ಹಾಗೂ ವೈಶಿಷ್ಠ ಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಅ.28ರಂದು ಬೆಳಗ್ಗೆ 11 ಗಂಟೆಗೆ ರಾಜ್ಯಾದ್ಯಂತ ಏಕಕಾಲದಲ್ಲಿ ಕನ್ನಡದ ಶ್ರೇಷ್ಠತೆಯನ್ನು ಸಾರುವ ‘1.ಬಾರಿಸು ಕನ್ನಡ ಡಿಂಡಿಮವ, 2.ಜೋಗದ ಸಿರಿ ಬೆಳಕಿನಲ್ಲಿ, 3.ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಈ ಗೀತೆಗಳ ನಾಡಗೀತೆಯೊಂದಿಗೆ ಹಾಡಲು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಉಡುಪಿ ಜಿಲ್ಲೆಯಲ್ಲಿ ಮಣಿಪಾಲದ ಜಿಲ್ಲಾದಿಕಾರಿ ಕಚೇರಿ ಸಂಕೀರ್ಣ, ಎಲ್ಲಾ ಗ್ರಾಪಂಗಳಲ್ಲಿ, ಜಿಲ್ಲೆಯ ಎಲ್ಲಾ ಎ ಮತ್ತು ಬಿ ಗ್ರೇಡ್ ದೇವಸ್ಥಾನಗಳಲ್ಲಿ, ಎಲ್ಲಾ ಶಾಲೆಗಳಲ್ಲಿ, ಎಲ್ಲಾ ಪದವಿ ಪೂರ್ವ ಕಾಲೇಜುಗಳಲ್ಲಿ, ಎಲ್ಲಾ ಪದವಿ ಕಾಲೇಜುಗಳಲ್ಲಿ, ಮಣಿಪಾಲ ಮಾಹೆಯ ಎಲ್ಲಾ ವಿದ್ಯಾಸಂಸ್ಥೆಗಳಲ್ಲಿ, ಜಿಲ್ಲೆಯ ಮೂರು ಇಂಜಿನಿಯರಿಂಗ್ ಕಾಲೇಜುಗಳಲ್ಲಿ (ನಿಟ್ಟೆ, ಮೂಡ್ಲಕಟ್ಟೆ, ಬಂಟಕಲ್ಲು), ರಿಕ್ಷಾ ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಲ್ಲಿ, ಎಲ್ಲಾ ಬ್ಯಾಂಕುಗಳು, ಎಲ್ಲಾ ಕಾರ್ಖಾನೆಗಳು, ಮಲ್ಪೆ ಮತ್ತು ಗಂಗೊಳ್ಳಿಯ ಬಂದರುಗಳಲ್ಲಿ ಹಾಡುವಂತೆ ಸೂಚನೆಗಳನ್ನು ನೀಡಲಾಗಿದೆ.

ಇದರೊಂದಿಗೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಶ್ರೀಕೃಷ್ಣ ಮಠ, ಮಲ್ಪೆ ಬೀಚ್, ಮಲ್ಪೆ ಸೀವಾಕ್, ಕಾರ್ಕಳದ ಜೈನ ಬಸದಿ, ಗೊಮ್ಮಟಬೆಟ್ಟ, ವರಂಗ ಮುಂತಾದ ಪ್ರದೇಶಗಳಲ್ಲಿ ಸಹ ಈ ಕಾರ್ಯಕ್ರಮವನ್ನು ಆಯೋಜಿ ಸಲಾಗುತ್ತಿದೆ. ಪಡುಬಿದ್ರೆಯ ಬ್ಲೂ ಫ್ಲಾಗ್ ಬೀಚ್, ಕಾಪು ಲೈಟ್‌ಹೌಸ್ ಬಳಿಯಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.

ಇದರೊಂದಿಗೆ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಶ್ರೀಕೃಷ್ಣ ಮಠ, ಮಲ್ಪೆ ಬೀಚ್, ಮಲ್ಪೆ ಸೀವಾಕ್, ಕಾರ್ಕಳದ ಜೈನ ಬಸದಿ, ಗೊಮ್ಮಟಬೆಟ್ಟ, ವರಂಗ ಮುಂತಾದ ಪ್ರದೇಶಗಳಲ್ಲಿ ಸಹ ಈ ಕಾರ್ಯಕ್ರಮವನ್ನು ಆಯೋಜಿ ಸಲಾಗುತ್ತಿದೆ. ಪಡುಬಿದ್ರೆಯ ಬ್ಲೂ ಫ್ಲಾಗ್ ಬೀಚ್, ಕಾಪು ಲೈಟ್‌ಹೌಸ್ ಬಳಿಯಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಮೀನುಗಾರಿಕೆ ಇಲಾಖೆ ವತಿಯಿಂದ ಬೋಟ್‌ಗಳಲ್ಲಿ ಮೀನುಗಾರರಿಂದ, ಮೆಸ್ಕಾಂ ವತಿಯಿಂದ ಲೈನ್‌ಮೆನ್‌ಗಳ ಮೂಲಕ, ಕೈಗಾರಿಕೆ ಇಲಾಖೆಯಿಂದ ಜಿಲ್ಲೆಯ ಎಲ್ಲಾ ಕೈಗಾರಿಕೆ ಸಂಸ್ಥೆಗಳಲ್ಲಿ, ಗೇರುಬೀಜ ಕಾರ್ಖಾನೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಂದ, ಅರಣ್ಯ ಇಲಾಖೆಯಿಂದ ಅರಣ್ಯ ರಕ್ಷಕರಿಂದ ಅರಣ್ಯದಲ್ಲಿ, ಟ್ರೀ ಪಾರ್ಕ್‌ಗಳಲ್ಲಿ, ಮುಜರಾಯಿ ಇಲಾಖೆ ವತಿಯಿಂದ ಕೊಲ್ಲೂರು, ಮಂದಾರ್ತಿ, ಆನೆಗುಡ್ಡೆ ದೇವಸ್ಥಾನಗಳ ಮುಂಭಾಗದಲ್ಲಿ ಕಾರ್ಯ ಕ್ರಮಗಳನ್ನು ಆಯೋಜಿಸುವಂತೆ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News