ಮಂಗಳೂರು: ಅ.28ರಂದು ‘ದಿ ಆಲಿವ್ ರೆಸ್ಟೋರೆಂಟ್’ ಉದ್ಘಾಟನೆ

Update: 2021-10-27 17:18 GMT

ಮಂಗಳೂರು, ಅ.27: ನಗರದ ಲಾಲ್‌ಬಾಗ್ ಸಮೀಪದ ಕರಾವಳಿ ಉತ್ಸವ ಮೈದಾನದೆದುರು ಲೇಡಿಹಿಲ್ ರಸ್ತೆಯ ಮೂರನೆ ಕ್ರಾಸ್‌ನಲ್ಲಿ ‘ದಿ ಆಲಿವ್ ರೆಸ್ಟೋರೆಂಟ್’ನ ಉದ್ಘಾಟನೆಯು ಅ.28 ರಂದು ಸಂಜೆ 4ಗಂಟೆಗೆ ನಡೆಯಲಿದೆ.

ಮುಖ್ಯ ಅತಿಥಿಗಳಾಗಿ ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭಾಗವಹಿಸಲಿದ್ದಾರೆ.

ರೆಸ್ಟೋರೆಂಟ್ ಕ್ಷೇತ್ರದಲ್ಲಿ ಸುಮಾರು 14 ವರ್ಷಗಳ ಅನುಭವವಿರುವ ಕೇರಳ ಮೂಲದ ‘ದಿ ಆಲಿವ್’ ಗ್ರೂಪ್ ತಿರುವನಂತಪುರಂನಲ್ಲಿ 2, ಬಹರೈನ್, ದುಬೈ, ಎರ್ನಾಕುಳಂ, ಕಲ್ಲಿಕೋಟೆ, ಬೆಂಗಳೂರಿನಲ್ಲಿ ತಲಾ ಒಂದೊಂದು ರೆಸ್ಟೋರೆಂಟ್ ಹೊಂದಿದೆ. ಇದೀಗ 8ನೆ ರೆಸ್ಟೋರೆಂಟ್ ಮಂಗಳೂರಿನಲ್ಲಿ ತೆರೆಯಲಿದೆ.

ಮಲ್ಟಿ ಕುಸಿನ್ ಆ್ಯಂಡ್ ಸೀಫುಡ್ ವಿಶೇಷತೆಗೆ ಹೆಸರಾದ ‘ದಿ ಆಲಿವ್ ರೆಸ್ಟೋರೆಂಟ್’ನಲ್ಲಿ 800ಕ್ಕೂ ಅಧಿಕ ವಿಶೇಷ ಖಾದ್ಯಗಳಿವೆ. ವಿವಿಧ ಬಗೆಯ ಮತ್ಸ್ಯ ಖಾದ್ಯಗಳು, ಅರೆಬಿಕ್, ಇರಾನಿಯನ್, ಚೈನೀಸ್ ಮತ್ತು ಕಾಂಟಿನೆಂಟಲ್ ಖಾದ್ಯಗಳು ಲಭ್ಯವಿದೆ. ಏಕಕಾಲದಲ್ಲಿ ಸುಮಾರು 250ರಷ್ಟು ಗ್ರಾಹಕರು ಭಕ್ಷಭೋಜನ ಸವಿಯುವ ವ್ಯವಸ್ಥೆ ಇದೆ. ಹಟ್ ಮಾದರಿಯ ಈ ರೆಸ್ಟೋರೆಂಟ್‌ನಲ್ಲಿ ಪಾರ್ಟಿ ಹಾಲ್‌ಗೆ ಸ್ಥಳಾವಕಾಶವಿದೆ. ಅಲ್ಲದೆ ಕಾರು ಪಾರ್ಕಿಂಗ್ ವ್ಯವಸ್ಥೆಯೂ ಇದೆ ಎಂದು ‘ದಿ ಆಲಿವ್’ ಗ್ರೂಪ್‌ನ ಅಧ್ಯಕ್ಷ ಶಾಹಿದ್ ಕಲ್ಲಿಕೋಟೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News