​ಎಚ್‌ಪಿಸಿಎಲ್ ನೌಕರ ನಾಪತ್ತೆ

Update: 2021-10-27 16:23 GMT

ಮಂಗಳೂರು, ಅ.27: ನಗರ ಹೊರವಲಯದ ಎಚ್‌ಪಿಸಿಎಲ್‌ನ ನೌಕರ ಆಶೀತ್ ಅಮೀನ್ (36) ಎಂಬವರು ಅ.25ರಿಂದ ಕಾಣೆಯಾಗಿದ್ದಾರೆ.

ಪಡೀಲ್‌ನಲ್ಲಿರುವ ತನ್ನ ಪತ್ನಿಯ ಮನೆಯಲ್ಲಿ ವಾಸವಾಗಿದ್ದ ಆಶೀತ್ ಅಮೀನ್ ಅ.25ರಂದು ತನ್ನ ಮನೆಗೆ ಬಂದಿದ್ದು, ಅಂದು ಮಧ್ಯಾಹ್ನ 1 ಗಂಟೆಗೆ ತುರ್ತು ಕೆಲಸವಿದೆ ಎಂದು ಹೇಳಿ ಬೈಕ್‌ನಲ್ಲಿ ಹೋದವರು ಈವರೆಗೂ ಮನೆ ಬರಲಿಲ್ಲ. ಬದಲಾಗಿ ಬೈಕ್ ಮತ್ತು ಮೊಬೈಲನನ್ನು ಸುರತ್ಕಲ್‌ನಲ್ಲಿ ಬಿಟ್ಟು ಹೋಗಿದ್ದಾರೆ ಎಂದು ಅಶೀತ್ ಅಮೀನ್‌ರ ಸಹೋದರ ಸತೀಶ್ ಅಮೀನ್ ಮಂಗಳೂರು ಗ್ರಾಮಾಂತರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಎಚ್‌ಪಿಸಿಎಲ್‌ನಲ್ಲಿ ಗ್ಯಾಸ್ ಫಿಲ್ಲಿಂಗ್ ಕೆಲಸ ಮಾಡಿಕೊಂಡಿದ್ದ ಅಶೀತ್ ಅಮೀನ್ 5.5 ಅಡಿ ಎತ್ತರವಿದ್ದು ಎಣ್ಣೆಗಪ್ಪು ಮೈಬಣ್ಣ, ಕೋಲುಮುಖ, ತೆಳುವಾದ ಗಡ್ಡ ಹೊಂದಿದ್ದಾರೆ. ಮನೆಯಿಂದ ಹೊರಡುವಾಗ ಬಿಳಿ ಬಣ್ಣದ ಉದ್ದ ತೋಳಿನ ಅಂಗಿ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದರು. ಬಲ ಕಾಲಿನಲ್ಲಿ ಬೈಕ್‌ನ ಸೈಲೆನ್ಸರ್ ತಾಗಿ ಉಂಟಾದ ಹಳೆಯ ಸುಟ್ಟ ಗಾಯವಿದೆ. ಮಾಹಿತಿ ದೊರೆತವರು ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News