ಮಂಗಳೂರು: ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಬಾಲಕಿಗೆ ಸಹಾಯ ನೀಡಲು ಮನವಿ

Update: 2021-10-28 05:52 GMT
ತಂಝೀಮ್‌

ಮಂಗಳೂರು : ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ 6ರ ಹರೆಯದ ತನ್ನ ಮಗಳ ಚಿಕಿತ್ಸೆಗೆ ಆರ್ಥಿಕ ನೆರವು ನೀಡುವಂತೆ ಆಕೆಯ ತಂದೆ ಮುಹಮ್ಮದ್ ರಫೀಕ್ ಎಂಬವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ನನಗೆ ಮೂವರು ಹೆಣ್ಮಕ್ಕಳು. ಆ ಪೈಕಿ ಕೊನೆಯ ಮಗಳು ತಂಝೀಮ್‌ಗೆ ಹುಟ್ಟಿದಾಗಲೇ ಮಲದ್ವಾರದ ಸಮಸ್ಯೆಯಿತ್ತು. ತಿಂಗಳ ಹಿಂದೆ ಅದರ ಚಿಕಿತ್ಸೆ ಮಾಡಲಾಗಿದೆ. ಈಗಾಗಲೆ ಮಗಳಿಗೆ ಒಟ್ಟು ಐದು ಶಶ್ತ್ರಚಿಕಿತ್ಸೆ ಆಗಿದ್ದು, ಸುಮಾರು ಐದಾರು ಲಕ್ಷ ರೂ. ವ್ಯಯಿಸಲಾಗಿದೆ. ಇದೀಗ ಕಿಡ್ನಿಯ ಸಮಸ್ಯೆಯ ಪರಿಹಾರಕ್ಕೆ ಚಿಕಿತ್ಸೆ ಮಾಡಬೇಕಿದೆ. ದೇರಳಕಟ್ಟೆಯ ಯೆನೆಪೊಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಮಗಳನ್ನು ದಾಖಲಿಸಿರುವೆ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ತನಗೆ ಸದ್ಯ ದಿಕ್ಕು ತೋಚದಂತಾಗಿದೆ. ಚಿಕಿತ್ಸೆಗಾಗಿ 3 ಲಕ್ಷಕ್ಕೂ ಅಧಿಕ ಸಾಲವನ್ನೂ ಮಾಡಿದ್ದೇನೆ. ಮಗಳ ಆರೈಕೆ, ಉಪಚಾರದಿಂದ ಸರಿಯಾಗಿ ದುಡಿಮೆ ಮಾಡಲು ಸಮಯವಿಲ್ಲವಾಗಿದೆ. ನಾನೀಗ ಆರ್ಥಿಕವಾಗಿ ತುಂಬಾ ಸಮಸ್ಯೆಯಲ್ಲಿದ್ದು, ಮಗಳ ಚಿಕಿತ್ಸೆಗೆ ನೆರವು ನೀಡಿ ಸಹಕರಿಸಬೇಕು ಎಂದು ಶಿರಸಿಯ ಮುಹಮ್ಮದ್ ರಫೀಕ್ ಮನವಿ ಮಾಡಿದ್ದಾರೆ.

ಮುಹಮ್ಮದ್ ರಫೀಕ್ / ಬ್ಯಾಂಕ್ ಆಫ್ ಬರೋಡಾ, ಉಳಿತಾಯ ಖಾತೆ ಸಂಖ್ಯೆ: 64560100007317 (ಐಎಫ್‌ಎಸ್‌ಸಿ ಕೋಡ್- BARBOVJSIUT)ಗೆ ಧನ ಸಹಾಯ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಮೊ.ಸಂ: 8861881906ನ್ನು ಸಂಪರ್ಕಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News