ಹೆಬ್ರಿ: ಮುನಿಯಾಲು ಗೋಧಾಮದಲ್ಲಿ ಸ್ವದೇಶಿ ತಳಿ ಗೋವುಗಳ ಸಂರಕ್ಷಣೆ

Update: 2021-10-28 16:49 GMT

ಹೆಬ್ರಿ, ಅ.28: ತಾಲೂಕಿನ ಮುನಿಯಾಲ್‌ನ ಸುಮಾರು 28ಎಕ್ರೆ ಜಾಗದಲ್ಲಿ ನಿರ್ಮಾಣಗೊಂಡಿರುವ ಗೋಧಾಮದಲ್ಲಿ ಪ್ರಾಚೀನ ಭಾರತದ ಗೋವಿನ ವಿವಿಧ ತಳಿಗಳನ್ನು ಅಭಿವೃದ್ಧಿ ಪಡಿಸುವುದರೊಂದಿಗೆ ಸ್ವದೇಶಿ ತಳಿಗಳ ಸಂರಕ್ಷಣೆ ಮೂಲ ಉದ್ದೇಶವಾಗಿದೆ ಎಂದು ಗೋಧಾಮದ ಸ್ಥಾಪಕ ಮೂಡಬಿದ್ರೆಯ ಉದ್ಯಮಿ ರಾಮಕೃಷ್ಣ ಆಚಾರ್ ತಿಳಿಸಿದ್ದಾರೆ.

ಇದರ ಜೊತೆಗೆ ನೆಲ-ಜಲದ ಸಂರಕ್ಷಣೆ, ಮುಂದಿನ ಪೀಳಿಗೆಗೆ ಗ್ರಾಮೀಣ ಬದುಕನ್ನು ಪರಿಚಯಿಸುವುದು, ಯುವ ಜನತೆಯನ್ನು ಹೈನುಗಾರಿಕೆಯತ್ತ ಆಕರ್ಷಿಸಿ ಪ್ರೇರೇಪಿಸುವುದು ತಮ್ಮ ಗುರಿಯಾಗಿದೆ ಎಂದು ಅವರು ತಮ್ಮ ಗೋಧಾಮದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುಮಾರು 28 ಎಕ್ರೆ ಜಾಗದಲ್ಲಿ ಗೋಧಾಮ ಎಂಬ ಗೋವುಗಳ ಸಂರಕ್ಷಣೆಯ ತಾಣವನ್ನು ಕೆಲ ವರ್ಷಗಳ ಹಿಂದೆ ಸ್ಥಾಪಿಸಿರುವ ಅವರು, ಭಾರತೀಯ ದೇಶೀಯ ತಳಿಗಳಾದ ಗುಜರಾತನ ಕಥಿಯವಾಡ್, ಗಿರ್ ಕಾಡುಗಳಲ್ಲಿ ಇರುವ ಗಿರ್ ದನಗಳು, ಪಂಜಾಬ್ ಮೂಲದ ಸಾವಾಲ, ರಾಜಸ್ಥಾನದ ರಾಥಿ, ಥಾಪಾರ್ಕರ್, ಮೂಲ ಪಾಕಿಸ್ತಾನದ ಸಿಂಧ್ ಪ್ರದೇಶ, ಗುಜರಾತ್ ಮತ್ತು ರಾಜಸ್ಥಾನದಲ್ಲಿ ಕಂಡು ಬರುವ ಕಾಂಗ್ರೀಜ್ ಜಾತಿಯ ದನಗಳನ್ನು ಸಾಕುತ್ತಿದ್ದಾರೆ.

ಈ ಗೋವುಗಳು ನಿಸರ್ಗ ರಮಣೀಯ ಹಚ್ಚ ಹಸಿರಿನ ಕಾನನದ ಮದ್ಯೆ ವಿಸ್ತಾರವಾದ ಜಾಗದಲ್ಲಿ ಸ್ವಚಂದವಾಗಿ ತಿರುಗಾಡುತ್ತಾ ತಮಗೆ ಬೇಕಾದ ಸಮಯದಲ್ಲಿ ಮೇವನ್ನು ತಿನ್ನುತ್ತಾ, ಬಾಯಾರಿಕೆಯನ್ನು ತಣಿಸಿಕೊಳ್ಳುತ್ತವೆ. ಹಾಲು ಕರೆಯುವ ಸ್ಥಳಕ್ಕೆ ಬಂದು ಹಾಲು ಕರೆದ ಕೂಡಲೇ ಮತ್ತೆ ತಮ್ಮ ಸ್ವಸ್ಥಾನಕ್ಕೆ ತೆರಳುತ್ತವೆ. ಪಕ್ಕದ ವಿಶಾಲ ಜಾಗದಲ್ಲಿ ಸಾಕಿದ ಗೋವುಗಳಿಗಾಗಿ ಸುಮಾರು 3ಎಕ್ರೆ ಜಮೀನಿನಲ್ಲಿ ಹುಲ್ಲು, ಅಮೃತ ಬಳ್ಳಿ, ಅಗಸೆ ಬೀಜ, ಕಬ್ಬು, ಹತ್ತಿಯ ಗಿಡ ಮತ್ತು ಆಯುರ್ವೇದಿಯ ಗುಣಗಳುಳ್ಳ ಗಿಡ ಮೂಲಿಕೆಗ ಸಸಿಗಳನ್ನು ನೆಟ್ಟು ಬೆಳೆಸಿದ್ದಾರೆ.

ಈ ಗೋವುಗಳು ನಿಸರ್ಗ ರಮಣೀಯ ಹಚ್ಚ ಹಸಿರಿನ ಕಾನನದ ಮದ್ಯೆ ವಿಸ್ತಾರವಾದ ಜಾಗದಲ್ಲಿ ಸ್ವಚಂದವಾಗಿ ತಿರುಗಾಡುತ್ತಾ ತಮಗೆ ಬೇಕಾದ ಸಮಯದಲ್ಲಿ ಮೇವನ್ನು ತಿನ್ನುತ್ತಾ, ಬಾಯಾರಿಕೆಯನ್ನು ತಣಿಸಿಕೊಳ್ಳುತ್ತವೆ. ಹಾಲು ಕರೆಯುವ ಸ್ಥಳಕ್ಕೆ ಬಂದು ಹಾಲು ಕರೆದ ಕೂಡಲೇ ಮತ್ತೆ ತಮ್ಮ ಸ್ವಸ್ಥಾನಕ್ಕೆ ತೆರಳುತ್ತವೆ. ಪಕ್ಕದ ವಿಶಾಲ ಜಾಗದಲ್ಲಿ ಸಾಕಿದ ಗೋವುಗಳಿಗಾಗಿ ಸುಮಾರು 3ಎಕ್ರೆ ಜಮೀನಿನಲ್ಲಿ ಹುಲ್ಲು, ಅಮೃತ ಬಳ್ಳಿ, ಅಗಸೆ ಬೀಜ, ಕಬ್ಬು, ಹತ್ತಿಯ ಗಿಡ ಮತ್ತು ಆಯುರ್ವೇದಿಯ ಗುಣಗಳುಳ್ಳ ಗಿಡ ಮೂಲಿಕೆಗಳ ಸಸಿಗಳನ್ನು ನೆಟ್ಟು ಬೆಳೆಸಿದ್ದಾರೆ. ಗೋವುಗಳಿಗೆ ಸಾವಯವ ರೀತಿಯ ಆಹಾರವನ್ನು ನೀಡಿ ಸಂಪೂರ್ಣ ರಾಸಾಯನಿಕ ಮುಕ್ತ ಶುದ್ಧ ಗೋವಿನ ಹಾಲನ್ನು ಪಡೆಯುತಿದ್ದಾರೆ. ವಿಶೇಷವೆಂದರೆ ಗೋಧಾಮದಲ್ಲಿ ತಯಾರಾಗುವ ಹಾಲು ಹುಟ್ಟಿದ ಮಗುವಿಗೂ ನೀಡಲು ಯೋಗ್ಯವಾಗಿದೆ. ಯಾವುದೇ ರೀತಿಯ ಕೃತಕ ರಾಸಾಯನಿಕ ಬಳಸದೇ ಸಾವಯವ ರೀತಿಯ ಆಹಾರವನ್ನು ನೀಡಿ ಸಂಪೂರ್ಣ ಶುದ್ಧ ರೀತಿಯಲ್ಲಿ ಸಿಗುವ ಗೋವಿನ ಹಾಲನ್ನು ಎಲ್ಲರೂ ಕುಡಿಯಬಹುದಾಗಿದೆ.

ಮುಂದಿನ ಯೋಜನೆಗಳು: ಮುಂದಿನ ದಿನಗಳಲ್ಲಿ ದೇಶಿಯ ತಳಿಗಳನ್ನು ಅಭಿವೃದ್ಧಿ ಪಡಿಸುವುದು. ಯುವಕರಿಗೆ ಗೋವುಗಳನ್ನು ಸಾಕುವ ಬಗ್ಗೆ ಮಾಹಿತಿ ನೀಡುವುದು. ತಾಂತ್ರಿಕತೆಯನ್ನೆ ನೆಚ್ಚಿಕೊಂಡು ಹೋಗುವ ಯುವಕರಿಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸಿ ಬದುಕು ಕಟ್ಟಿಕೊಳ್ಳಲು ನೆರವಾಗುವುದು. ಸ್ವಉದ್ಯೋಗ ನಡೆಸುವ ಆಕಾಂಕ್ಷೆ ಉಳ್ಳವರು ಗೋಧಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ತಮ್ಮ ತಮ್ಮ ಜಿಲ್ಲೆ ಅಥವಾ ರಾಜ್ಯಗಳಲ್ಲಿ ಗೊಸಾಕಾಣಿಕೆ ಕೇಂದ್ರ ತೆರೆಯಲು, ಪರಿಶುದ್ಧ ಹಾಲು, ತುಪ್ಪ, ಬೆಣ್ಣೆ, ಮಜ್ಜಿಗೆ ಯನ್ನು ತಯಾರಿಸಿ ಮಾರಾಟ ಮಾಡಲು ಉತ್ತೇಜಿಸುವುದು ತಮ್ಮ ಮುಂದಿನ ಯೋಜನೆಗಳಲ್ಲಿ ಸೇರಿವೆ ಎಂದು ರಾಮಕೃಷ್ಣ ಆಚಾರ್ ತಿಳಿಸಿದರು.

ನಗರಗಳಲ್ಲಿ ವಾಸಿಸುವ ಕೆಲವು ಜನರಿಗೆ ಗೋವನ್ನು ಸಾಕಲು ಆಸಕ್ತಿ ಇರುತ್ತದೆ. ಆದರೆ ನಗರಗಳಲ್ಲಿ ಗೋವನ್ನು ಸಾಕಲು ಹಲವಾರು ಸಮಸ್ಯೆಗಳಿರುತ್ತವೆ. ಇಂತಹ ಸಮಸ್ಯೆಗಳನ್ನು ಮನಗಂಡು ಗೋಧಾಮದಲ್ಲಿ ಸದಸ್ಯತ್ವ ಅಭಿಯಾನವನ್ನು ಆರಂಭಿಸಲಾಗಿದೆ. ಮಾಸಿಕ, ವಾರ್ಷಿಕ ಸದಸ್ಯತ್ವವನ್ನು ನೀಡಿ ಗೋಧಾಮದ ಸದಸ್ಯರಾದರೆ ಹಲವಾರು ಪ್ರಯೋಜನಗಳಿವೆ ಎಂದವರು ವಿವರಿಸಿದರು.

ಈ ಸಂದರ್ಭದಲ್ಲಿ ಟ್ರಸ್ಟಿಗಳಾದ ಸವಿತಾ ರಾಮಕೃಷ್ಣ ಆಚಾರ್ ಹಾಗೂ ಡಾ. ಜಯಪ್ರಕಾಶ್ ಮಾವಿನಕುಳಿ ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News