ಮೋಹನ್ ಬಾಗನ್ ನಿರ್ದೇಶಕ ಹುದ್ದೆ ತೊರೆದ ಗಂಗುಲಿ

Update: 2021-10-28 18:11 GMT

ಮುಂಬೈ, ಅ. 28: ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಪಂದ್ಯಾವಳಿಯ ತಂಡವಾಗಿರುವ ಎಟಿಕೆ ಮೊಹನ್ ಬಾಗನ್‌ನ ನಿರ್ದೇಶಕ ಹುದ್ದೆಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗುಲಿ ತೊರೆದಿದ್ದಾರೆ. ಯಾವುದೇ ಸಂಭಾವ್ಯ ಹಿತಾಸಕ್ತಿ ಸಂಘರ್ಷವನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಅವರು ಈ ಕ್ರಮ ತೆಗೆದುಕೊಂಡಿದ್ದಾರೆ. ಕೋಲ್ಕತಾದ ಆರ್‌ಪಿ ಸಂಜೀವ್ ಗೋಯಂಕಾ ಸಮೂಹವು ಐಪಿಎಲ್‌ನ ಲಕ್ನೊ ತಂಡವನ್ನು ದಾಖಲೆಯ 7,090 ಕೋಟಿ ರೂಪಾಯಿಗೆ ಖರೀದಿಸಿದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.ಗೋಯಂಕಾ ಎಟಿಕೆ ಮೋಹನ್ ಬಾಗನ್ ಕ್ಲಬ್‌ನ ಮಾಲಕರಾಗಿದ್ದಾರೆ.

2014ರಲ್ಲಿ ಇಂಡಿಯನ್ ಸೂಪರ್ ಲೀಗ್ ಆರಂಭಗೊಂಡಂದಿನಿಂದ ಗಂಗುಲಿ ಅಟ್ಲೆಟಿಕೊ-ಕೋಲ್ಕತಾ ತಂಡದ ಭಾಗವಾಗಿದ್ದಾರೆ. ಈ ಕ್ಲಬ್ ಮೋಹನ್ ಬಾಗನ್‌ನೊಂದಿಗೆ ವಿಲೀನಗೊಳ್ಳುವ ಮೊದಲು ಅದಕ್ಕೆ ಎಟಿಕೆ (ಅಮರ್‌ತೋಮರ್ ಕೋಲ್ಕತಾ) ಎಂಬುದಾಗಿ ಮರುನಾಮಕರಣ ಮಾಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News