×
Ad

1983ರ ಪ್ರಕರಣ: ಚೋಟಾ ರಾಜನ್ ನ ಖುಲಾಸೆಗೊಳಿಸಿದ ಮುಂಬೈ ನ್ಯಾಯಾಲಯ

Update: 2021-10-29 23:40 IST

ಮುಂಬೈ, ಅ. 29: ಇಬ್ಬರು ಪೊಲೀಸರ ಕೊಲೆ ಯತ್ನದ 38 ವರ್ಷ ಹಳೆಯ ಪ್ರಕರಣದಲ್ಲಿ ಚೋಟಾ ರಾಜನ್ ಅನ್ನು ಇಲ್ಲಿನ ವಿಶೇಷ ನ್ಯಾಯಾಲಯ ಗುರುವಾರ ಖುಲಾಸೆಗೊಳಿಸಿದೆ.

1983ರಲ್ಲಿ ಮುಂಬೈ ಪೂರ್ವ ಉಪನಗರದಲ್ಲಿ ಕಳ್ಳಭಟ್ಟಿ ವಿರುದ್ಧದ ಕಾರ್ಯಾಚರಣೆ ಸಂದರ್ಭ ಪೊಲೀಸರು ರಾಜನ್ ಅನ್ನು ಬಂಧಿಸಿದ್ದರು.

ಗಸ್ತು ಸಂದರ್ಭ ಪೊಲೀಸರು ರಾಜನ್ ಹಾಗೂ ಆತನ ಸಹವರ್ತಿ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿರುವುದು ನೋಡಿದ್ದರು. ಸಂಶಯದ ಕಾರಣಕ್ಕೆ ಪೊಲೀಸರು ಟ್ಯಾಕ್ಸಿಯನ್ನು ಹಿಂಬಾಲಿಸಿದ್ದರು. ಪೊಲೀಸರು ಟ್ಯಾಕ್ಸಿಯನ್ನು ನಿಲ್ಲಿಸಲು ಪ್ರಯತ್ನಿಸಿದಾಗ, ಅವರಿಬ್ಬರು ಪರಾರಿಯಾಗಲು ಯತ್ನಿಸಿದ್ದರು. ಈ ಸಂದರ್ಭ ಹೊಯ್ಕೈ ನಡೆದಿತ್ತು. ರಾಜನ್ ಇಬ್ಬರು ಪೊಲೀಸರಿಗೆ ಚಾಕು ತೋರಿಸಿದ್ದ.

ಇದು ರಾಜನ್ ವಿರುದ್ಧ ದಾಖಲಾದ ಅತಿ ಹಳೆಯ ಪ್ರಕರಣಗಳಲ್ಲಿ ಒಂದು. ಈ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರದೀಪ್ ಘರಾತ್ ಮೂಲಕ ಅಂತ್ಯದ ವರದಿ ಸಲ್ಲಿಸಿದ್ದರು. ಆದರೆ, ಅದನ್ನು ನ್ಯಾಯಾಲಯ ನಿರಾಕರಿಸಿತ್ತು. ಅಲ್ಲದೆ, ಪ್ರಕರಣದ ತನಿಖೆ ಮುಂದುವರಿಸುವಂತೆ ಸಿಬಿಐಗೆ ನಿರ್ದೇಶಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News