ಗಾಂಧಿ ನಂತರ ಭಾರತೀಯ ಸಮಾಜದ ಆಳವಾದ ಗ್ರಹಿಕೆ ಹೊಂದಿರುವ ಏಕೈಕ ನಾಯಕ ಪ್ರಧಾನಿ ಮೋದಿ: ರಾಜನಾಥ್ ಸಿಂಗ್

Update: 2021-10-30 07:29 GMT

ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು '24-ಕ್ಯಾರೆಟ್ ಚಿನ್ನ'ಎಂದು ಹೊಗಳಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮೋದಿ  ಅವರು "ಮಹಾತ್ಮ ಗಾಂಧಿಯವರ ನಂತರ ಭಾರತೀಯ ಸಮಾಜ ಹಾಗೂ ಅದರ ಮನೋವಿಜ್ಞಾನ" ದ ಆಳವಾದ ತಿಳುವಳಿಕೆಯನ್ನು ಹೊಂದಿರುವ ಏಕೈಕ ನಾಯಕರಾಗಿದ್ದಾರೆ ಎಂದು ಶುಕ್ರವಾರ ಹೇಳಿದ್ದಾರೆ.

ರಾಂಭೌ ಮಲ್ಗಿ ಪ್ರಬೋಧಿನಿ ಎಂಬ ಚಿಂತಕರ ಚಾವಡಿ ಆಯೋಜಿಸಿದ್ದ ಎರಡು ದಶಕಗಳ ಕಾಲ ಸರಕಾರದ ನೇತೃತ್ವವಹಿಸಿದ್ದ ನರೇಂದ್ರ ಮೋದಿ ಅವರ ಕುರಿತು ಅವಲೋಕನ ಎಂಬ ರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.

“ಭಾರತದ ರಾಜಕೀಯ ಇತಿಹಾಸದಲ್ಲಿ ಭಾರತ ಹಾಗೂ  ಅದರ ಮನೋವಿಜ್ಞಾನದ ಬಗ್ಗೆ ಮೋದಿಜಿಯವರ ತಿಳುವಳಿಕೆಗೆ ಸಾಟಿಯಿಲ್ಲ. ಮಹಾತ್ಮ ಗಾಂಧಿಯವರ ನಂತರ  ಭಾರತೀಯ ಸಮಾಜ ಮತ್ತು ಅದರ ಮನೋವಿಜ್ಞಾನದ ಆಳವಾದ ಗ್ರಹಿಕೆಯನ್ನು ಹೊಂದಿರುವ ಏಕೈಕ ನಾಯಕ ಮೋದಿಜಿ ಹಾಗೂ ಅದು ಘನ ಮತ್ತು ಸಮಗ್ರ ವೈಯಕ್ತಿಕ ಅನುಭವವನ್ನು ಆಧರಿಸಿದೆ ಎಂದರು.

“ಮೋದಿಜಿಯನ್ನು ಒಬ್ಬ ವ್ಯಕ್ತಿಯಾಗಿ ನೋಡುವುದಕ್ಕಿಂತ ಹೆಚ್ಚಾಗಿ ಕಲ್ಪನೆ, ತತ್ವಶಾಸ್ತ್ರ ಎಂದು ನೋಡಬೇಕು ಎಂದು ನಾನು ನಂಬುತ್ತೇನೆ. ಏಕೆಂದರೆ, ಪ್ರತಿ ಶತಮಾನದಲ್ಲಿ ಕೆಲವು ಜನರು ತಮ್ಮ ಬಲವಾದ ನಿರ್ಣಯ ಮತ್ತು ದೃಢವಾದ ಆಲೋಚನೆಗಳೊಂದಿಗೆ ಸಮಾಜವನ್ನು ಪರಿವರ್ತಿಸುವ ನೈಸರ್ಗಿಕ ಶಕ್ತಿಯೊಂದಿಗೆ ಜನಿಸುತ್ತಾರೆ ”ಎಂದು ಸಿಂಗ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News