×
Ad

ಅಖಿಲೇಶ್ ಯಾದವ್ ಸಮ್ಮುಖದಲ್ಲಿ 6 ಬಿಎಸ್‌ಪಿ ಶಾಸಕರು, ಓರ್ವ ಬಿಜೆಪಿ ಶಾಸಕ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆ

Update: 2021-10-30 14:57 IST

ಲಕ್ನೊ:ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಆರು ಶಾಸಕರು ಹಾಗೂ ಬಿಜೆಪಿಯ ಓರ್ವ ಶಾಸಕ ಶನಿವಾರ ಸಮಾಜವಾದಿ ಪಕ್ಷವನ್ನು ಅದರ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಸಮ್ಮುಖದಲ್ಲಿ ಲಕ್ನೋದಲ್ಲಿ ಪಕ್ಷದ ರಾಜ್ಯ ಪ್ರಧಾನ ಕಛೇರಿಯಲ್ಲಿ ಸೇರ್ಪಡೆಯಾದರು.

ಅಸ್ಲಾಂ ರೈನಿ, ಮುಜ್ತಾಬಾ ಸಿದ್ದಿಕಿ, ಅಸ್ಲಾಂ ಅಲಿ ಚೌಧರಿ, ಹಕೀಂ ಲಾಲ್ ಬಿಂದ್, ಸುಷ್ಮಾ ಪಟೇಲ್ ಹಾಗೂ  ಹರಗೋವಿಂದ್ ಭಾರ್ಗವ ಅವರು ಎಸ್‌ಪಿಗೆ ಸೇರ್ಪಡೆಗೊಂಡಿರುವ ಬಿಎಸ್‌ಪಿ ಶಾಸಕರು.

ಈ ಮಧ್ಯೆ, ಸೀತಾಪುರ ಶಾಸಕ ರಾಕೇಶ್ ರಾಥೋಡ್ ಬಿಜೆಪಿಗೆ ರಾಜೀನಾಮೆ ನೀಡಿ ಶನಿವಾರ ಸಮಾಜವಾದಿ ಪಕ್ಷ(ಎಸ್ಪಿ) ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News