ವಿಶ್ವ ಕಿಕ್‌ಬಾಕ್ಸಿಂಗ್ ಚಾಂಪಿಯನ್‌ಶಿಪ್: ಕಾಶ್ಮೀರದ ಬಾಲಕಿಗೆ ಚಿನ್ನ

Update: 2021-10-30 18:19 GMT
photo:twitter/
@kheloindia

ಶ್ರೀನಗರ, ಅ. 30: ಈಜಿಪ್ಟ್ ರಾಜಧಾನಿ ಕೈರೋದಲ್ಲಿ ನಡೆದ ವಿಶ್ವ ಕಿಕ್‌ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕಾಶ್ಮೀರದ ಬಾಲಕಿ 13 ವರ್ಷದ ತಾಜಮುಲ್ ಇಸ್ಲಾಮ್ ಚಿನ್ನದ ಪದಕ ಗೆದ್ದಿದ್ದಾರೆ. 14 ವರ್ಷದ ಕೆಳಗಿನ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿ ಚಿನ್ನ ಗೆದ್ದ ಮೊದಲ ಕಾಶ್ಮೀರಿ ಬಾಲಕಿ ಅವರಾಗಿದ್ದಾರೆ.

ಅವರು ಫೈನಲ್‌ನಲ್ಲಿ ಅರ್ಜೆಂಟೀನದ ಲಲಿನ ಅವರನ್ನು ಸೋಲಿಸಿದ್ದಾರೆ. ‘‘2016ರಲ್ಲಿ ಇಟಲಿಯಲ್ಲಿ ನಡೆದ ಪಂದ್ಯಾವಳಿಯ ಅಂಡರ್-9 ವಿಭಾಗದಲ್ಲಿ ನಾನು ಭಾರತವನ್ನು ಪ್ರತಿನಿಧಿಸಿದ್ದೆ. ಆ ಪಂದ್ಯಾವಳಿಯಲ್ಲಿ 90 ದೇಶಗಳಿಂದ ಸ್ಪರ್ಧಿಗಳು ಪಾಲ್ಗೊಂಡಿದ್ದರು’’ ಎಂದು ತಾಜಮುಲು ಹೇಳಿದರು.

ಉತ್ತರ ಕಾಶ್ಮೀರದ ಬಂಡೀಪುರ ಜಿಲ್ಲೆಯ ಟರ್ಕ್‌ಪುರ ಎಂಬ ಕುಗ್ರಾಮದಲ್ಲಿ ಜನಿಸಿರುವ ತಾಜಮುಲ್ ಬಂಡೀಪುರದ ಆರ್ಮಿ ಗುಡ್‌ವಿಲ್ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News