ಕೇಂದ್ರ ಸಚಿವ ಅಜಯ್ ಮಿಶ್ರಾ ವಾಹನದ ಮೇಲೆ ಮೊಟ್ಟೆ ತೂರಾಟ ನಡೆಸಿದ ಎನ್ ಎಸ್ ಯುಐ ಕಾರ್ಯಕರ್ತರು
Update: 2021-10-31 12:48 IST
ಭುವನೇಶ್ವರ: ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ವಾಹನದ ಮೇಲೆ ಇಲ್ಲಿನ ಬಿಜು ಪಟ್ನಾಯಕ್ ವಿಮಾನ ನಿಲ್ದಾಣದ ಹೊರಗೆ ಕಾಂಗ್ರೆಸ್ ನ ವಿದ್ಯಾರ್ಥಿ ಘಟಕ ನ್ಯಾಶನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ(ಎನ್ ಎಸ್ ಯುಐ)ಕಾರ್ಯಕರ್ತರು ರವಿವಾರ ಮೊಟ್ಟೆಗಳನ್ನು ಎಸೆದಿದ್ದಾರೆ.
ಸಚಿವರ ಪುತ್ರ ಆರೋಪಿಯಾಗಿರುವ ಲಖಿಂಪುರ-ಖೇರಿ ಹಿಂಸಾಚಾರ ಪ್ರಕರಣ ಖಂಡಿಸಿ ಎನ್ ಎಸ್ ಯುಐ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದರು. ವಿದ್ಯಾರ್ಥಿ ಘಟಕದ ಕಾರ್ಯಕರ್ತರು ಕೇಂದ್ರ ಸಚಿವರಿಗೆ ಕಪ್ಪು ಭಾವುಟವನ್ನು ಪ್ರದರ್ಶಿಸಿದರು.
ಕಟಕ್ ಬಳಿಯ ಮುಂಡಳಿಯಲ್ಲಿರುವ ಸಿಐ ಎಸ್ ಎಫ್ ಆವರಣದಲ್ಲಿನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ತೆರಳುತ್ತಿದ್ದರು. ಸಚಿವರ ಒಡಿಶಾ ಭೇಟಿಯನ್ನು ಪ್ರತಿಭಟಿಸುವುದಾಗಿ ಎನ್ ಎಸ್ ಯುಐ ಈ ಹಿಂದೆಯೇ ಹೇಳಿತ್ತು.