×
Ad

ವಾಣಿಜ್ಯ ಬಳಕೆ ಎಲ್ ಪಿಜಿ ಸಿಲಿಂಡರ್ ದರ 266 ರೂ.ಏರಿಕೆ

Update: 2021-11-01 11:13 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ವಾಣಿಜ್ಯ ಸಿಲಿಂಡರ್‌ಗಳ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್‌ಪಿಜಿ) ಬೆಲೆಯನ್ನು ಸೋಮವಾರ ರೂ. 266 ಹೆಚ್ಚಿಸಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ, 19 ಕೆಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆ ರೂ. 1,734 ರಿಂದ ರೂ. 2,000.50 ಆಗಲಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಆದಾಗ್ಯೂ, ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ದರಗಳನ್ನು ಯಥಾಸ್ಥಿತಿಯಲ್ಲಿ ಇರಿಸಲಾಗಿದೆ.

ಮುಂಬೈನಲ್ಲಿ 19 ಕೆಜಿಯ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ರೂ. 1,950 ಆಗಲಿದೆ. ಕೋಲ್ಕತ್ತಾದಲ್ಲಿ ವಾಣಿಜ್ಯ ಎಲ್‌ಪಿಜಿ ದರ ರೂ.2,073.50 ರಷ್ಟಿದ್ದರೆ, ಚೆನ್ನೈನಲ್ಲಿ ಈಗ 19 ಕೆಜಿ ಸಿಲಿಂಡರ್ ರೂ. 2,133 ಕ್ಕೆ ಲಭ್ಯವಿರುತ್ತದೆ.

ಈ ಹಿಂದೆ, ಅಕ್ಟೋಬರ್ 6 ರಂದು ಸಬ್ಸಿಡಿ ಗ್ಯಾಸ್ ಸೇರಿದಂತೆ ಎಲ್ಲಾ ವರ್ಗಗಳ ಎಲ್‌ಪಿಜಿ ಅಡುಗೆ ಅನಿಲ ಸಿಲಿಂಡರ್‌ಗಳ ಬೆಲೆಗಳನ್ನು ರೂ. 15  ಹೆಚ್ಚಿಸಲಾಯಿತು. ಅದಕ್ಕೂ ಮೊದಲು, ಅಕ್ಟೋಬರ್ 1 ರಂದು ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಎಲ್‌ಪಿಜಿ ದರಗಳನ್ನು ರೂ. 25 ಹೆಚ್ಚಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News