ನ. 8ರಿಂದ ಕೇಂದ್ರ ಸರಕಾರದ ಕಚೇರಿಗಳಲ್ಲಿ ಬಯೋಮೆಟ್ರಿಕ್ ಆರಂಭ

Update: 2021-11-02 18:23 GMT

ಹೊಸದಿಲ್ಲಿ, ನ. 2: ನವೆಂಬರ್ 8ರಿಂದ ಎಲ್ಲ ಉದ್ಯೋಗಿಗಳ ಹಾಜರಾತಿಗೆ ಬಯೋಮೆಟ್ರಿಕ್ ಆರಂಭಿಸಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದು ಸಿಬ್ಬಂದಿ ಸಚಿವಾಲಯ ಸುತ್ತೋಲೆ ಸೋಮವಾರ ಹೇಳಿದೆ. ಬಯೋಮೆಟ್ರಿಕ್ ಯಂತ್ರದ ಸಮೀಪ ಸ್ಯಾನಿಟೈಸರ್ ಇರಿಸುವುದು ಇಲಾಖೆಯ ಮುಖ್ಯಸ್ಥರ ಜವಾಬ್ದಾರಿ.

ಎಲ್ಲ ಉದ್ಯೋಗಿಗಳು ಹಾಜರಾತಿ ಹಾಕುವ ಮೊದಲು ಹಾಗೂ ನಂತರ ತಮ್ಮ ಕೈಗಳನ್ನು ಸ್ಯಾನಿಟೈಸ್ಗೊಳಿಸಬೇಕು ಎಂದು ಸುತ್ತೋಲೆ ಹೇಳಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕಳೆದ ವರ್ಷ ಕಡ್ಡಾಯ ಬಯೋಮೆಟ್ರಿಕ್ ಹಾಜರಾತಿಯನ್ನು ಸರಕಾರ ರದ್ದುಗೊಳಿಸಿತ್ತು. ‘‘ಎಲ್ಲಾ ಸಿಬ್ಬಂದಿ ತಮ್ಮ ಹಾಜರಾತಿ ಹಾಕುವಾಗ 6 ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು. ಅಗತ್ಯವಿದ್ದರೆ, ಜನಸಂದಣಿ ತಪ್ಪಿಸಲು ಹೆಚ್ಚುವರಿ ಬಯೋಮೆಟ್ರಿಕ್ ಹಾಜರಾತಿ ಯಂತ್ರವನ್ನು ಅಳವಡಿಸಬೇಕು’’ ಎಂದು ಎಲ್ಲ ಸಚಿವರು ಹಾಗೂ ಇಲಾಖೆಗಳಿಗೆ ರವಾನಿಸಲಾದ ಸುತ್ತೋಲೆಯಲ್ಲಿ ಸರಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News