ಲಸಿಕಾ ಗೊಂದಲ ನಿವಾರಿಸಿ

Update: 2021-11-04 11:24 GMT

ಮಾನ್ಯರೇ,

ದೇಶದಲ್ಲಿ ಕೊರೋನ ಪಿಡುಗು ತಡೆಗಟ್ಟುವ ಉದ್ದೇಶದಿಂದ ಸರಕಾರ ದೇಶದ ನಾಗರಿಕರಿಗೆ ಎರಡು ವಿಧದ ಲಸಿಕೆ ಒದಗಿಸಿದ್ದು ಆ ಎರಡರಲ್ಲಿ ಒಂದಕ್ಕೆ ಇತರ ದೇಶಗಳಲ್ಲಿ ಕಾಲಿರಿಸಲು ಮಾನ್ಯತೆಯೇ ಸಿಗುತ್ತಿಲ್ಲ ಎಂಬ ದೂರುಗಳು ಮಾಧ್ಯಮಗಳಲ್ಲಿ ಕೇಳಿಬರುತ್ತಿದೆ.

ದೇಶದಲ್ಲಿ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಎಂಬ ಎರಡು ಲಸಿಕೆಗಳ ಡೋಸ್‌ಗಳನ್ನು ನೀಡಲಾಗಿದ್ದು, ಆದರೆ ಕೋವ್ಯಾಕ್ಸಿನ್ ಲಸಿಕೆಗೆ ಅಂತರ್‌ರಾಷ್ಟ್ರೀಯ ಮಾನ್ಯತೆ ಸಿಗದೆ ಗಲ್ಫ್ ರಾಷ್ಟ್ರಗಳಿಗೆ ಉದ್ಯೋಗಕ್ಕಾಗಿ ತೆರಳಬೇಕಾದವರು ಪರಿತಪಿಸಬೇಕಾಗಿದೆ. ಹೀಗಾಗಿ ತನಗೆ ಮೂರನೇ ಡೋಸ್ ಲಸಿಕೆ ನೀಡಬೇಕೆಂದು ಕೇರಳದ ವ್ಯಕ್ತಿಯೊಬ್ಬರು ನ್ಯಾಯಾಲಯಕ್ಕೆ ಮೊರೆಹೋಗಿದ್ದು ದೇಶಾದ್ಯಂತ ಸುದ್ದಿಯಾಗಿದೆ.

ಸರಕಾರದ ಈ ಎರೆಡೆರಡು ಬಗೆಯ ಲಸಿಕಾ ನೀತಿಯಿಂದಾಗಿ ಹೊರರಾಷ್ಟ್ರದಲ್ಲಿ ಕೆಲಸಮಾಡಬೇಕಾದ ದೇಶದ ನಾಗರಿಕರು ಬಳಲುತ್ತಿದ್ದಾರೆ. ಅವರು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.

ಹಾಗಾಗಿ ಸರಕಾರ ಈ ಸಮಸ್ಯೆಯ ಬಗ್ಗೆ ಗಂಭೀರವಾಗಿ ಚಿಂತಿಸಿ ಇಂತಹ ಲಸಿಕಾ ಗೊಂದಲಗಳನ್ನು ಕೂಡಲೇ ನಿವಾರಿಸಬೇಕಾಗಿದೆ.

-ವೆಂಕಟೇಶ್ ಎನ್., ಮಂಗಳೂರು

Writer - ವೆಂಕಟೇಶ್ ಎನ್., ಮಂಗಳೂರು

contributor

Editor - ವೆಂಕಟೇಶ್ ಎನ್., ಮಂಗಳೂರು

contributor

Similar News