×
Ad

ಪಂಜಾಬ್ ನಲ್ಲಿ ಪೆಟ್ರೋಲ್ ಬೆಲೆ 10 ರೂ. ಡೀಸೆಲ್ ದರ 5 ರೂ. ಇಳಿಕೆ

Update: 2021-11-07 14:41 IST

ಚಂಡೀಗಢ: ಇಂದು ರಾತ್ರಿಯಿಂದ ಪಂಜಾಬ್‌ನಲ್ಲಿ ಪೆಟ್ರೋಲ್ ಬೆಲೆ ರೂ. 10, ಡೀಸೆಲ್‌ಗೆ  ರೂ. 5 ಇಳಿಕೆಯಾಗಲಿದೆ. ಇದು 70 ವರ್ಷಗಳಲ್ಲಿ ಆಗಿಲ್ಲ ಎಂದು ಮುಖ್ಯಮಂತ್ರಿ ಚರಣ್ ಜೀತ್ ಸಿಂಗ್ ಹೇಳಿದ್ದಾರೆಂದು NDTV ವರದಿ ಮಾಡಿದೆ.

 ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಆಡಳಿತವಿರುವ ಪಂಜಾಬ್ ನಲ್ಲಿ ಪೆಟ್ರೋಲ್ ಹಾಗೂ  ಡೀಸೆಲ್ ಮೇಲೆ ಭಾರಿ ರಿಯಾಯಿತಿ ನೀಡಲಾಗಿದೆ.

ಪಂಜಾಬ್‌ನಲ್ಲಿ ಪೆಟ್ರೋಲ್ ಬೆಲೆಯನ್ನು ರೂ. 10 ಮತ್ತು ಡೀಸೆಲ್‌ಗೆ ರೂ. 5 ಕಡಿತಗೊಳಿಸಲಾಗುವುದು ಎಂದು ಘೋಷಿಸಿದ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ, 70 ವರ್ಷಗಳಲ್ಲಿ ಇದು ಸಂಭವಿಸಿಲ್ಲ ಎಂದು ಹೇಳಿದರು.

"ಪಂಜಾಬ್‌ನಲ್ಲಿ ಪೆಟ್ರೋಲ್ ಈಗ ಅಗ್ಗವಾಗಿದೆ. ದಿಲ್ಲಿಗೆ ಹೋಲಿಸಿದರೆ ಪಂಜಾಬ್‌ನಲ್ಲಿ ಪೆಟ್ರೋಲ್ ಈಗ ರೂ. 9 ಕಡಿಮೆಯಾಗಿದೆ" ಎಂದು ಮುಖ್ಯಮಂತ್ರಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News