×
Ad

ನ್ಯೂಝಿಲ್ಯಾಂಡ್ ವಿರುದ್ದ ಅಫ್ಘಾನ್ ಗೆ ಗೆಲುವು ಹಾರೈಸಿದ ಭಾರತ ಕ್ರಿಕೆಟ್ ಅಭಿಮಾನಿಗಳು: ಮೀಮ್ಸ್ ವೈರಲ್

Update: 2021-11-07 14:50 IST
photo: AP

ದುಬೈ: ಎಲ್ಲರ ಕಣ್ಣು ಅಫ್ಘಾನಿಸ್ತಾನ ಹಾಗೂ ನ್ಯೂಝಿಲ್ಯಾಂಡ್ ನಡುವಿನ ರವಿವಾರ ನಡೆಯಲಿರುವ ನಿರ್ಣಾಯಕ ಪಂದ್ಯದ ಮೇಲೆ ನೆಟ್ಟಿದೆ. ಏಕೆಂದರೆ ಈ ಪಂದ್ಯವು ಟ್ವೆಂಟಿ-20 ವಿಶ್ವಕಪ್‌ ಟೂರ್ನಿಯ 2 ನೇ ಗುಂಪಿನ ಭವಿಷ್ಯವನ್ನು ನಿರ್ಧರಿಸುತ್ತದೆ. ನ್ಯೂಝಿಲ್ಯಾಂಡ್, ಭಾರತ ಹಾಗೂ  ಅಫ್ಘಾನಿಸ್ತಾನ ತಂಡಗಳು ಮುಂದಿನ ಸುತ್ತಿಗೆ ಮುನ್ನಡೆಯುವ ಸಮಾನ ಅವಕಾಶವನ್ನು ಹೊಂದಿವೆ. ಒಂದು ವೇಳೆ ನ್ಯೂಝಿಲ್ಯಾಂಡ್ ತಂಡ ಅಫ್ಘಾನಿಸ್ತಾನವನ್ನು ಸೋಲಿಸಿದರೆ ಅದು ಸೆಮಿ ಫೈನಲ್ ಗೇರುತ್ತದೆ.  ಒಂದೊಮ್ಮೆ ಅಫ್ಘಾನಿಸ್ತಾನವು ಕಿವೀಸ್ ಅನ್ನು ಸೋಲಿಸಿದರೆ  ಭಾರತ  ಸೆಮಿಫೈನಲ್ ಗೆ ಅರ್ಹತೆ ಪಡೆಯುವ ಸ್ಥಿತಿಗೆ ತಲುಪಲಿದೆ.

ಭಾರತೀಯ ಅಭಿಮಾನಿಗಳು ತಮ್ಮದೇ ಲೆಕ್ಕಾಚಾರವನ್ನು ಮಾಡಿದ್ದಾರೆ . ಅಫ್ಘಾನಿಸ್ತಾನವು ನ್ಯೂಝಿಲ್ಯಾಂಡ್ ಅನ್ನು ಸೋಲಿಸುತ್ತದೆ ಹಾಗೂ  ನಂತರ ಭಾರತವು ಸೋಮವಾರ ನಮೀಬಿಯಾವನ್ನು ಸೋಲಿಸುತ್ತದೆ ಎಂದು ಆಶಿಸುತ್ತಿದ್ದಾರೆ.

ರವಿವಾರ ಅಬುಧಾಬಿಯ ಶೇಖ್ ಝಾಯೆದ್ ಸ್ಟೇಡಿಯಂನಲ್ಲಿ ನ್ಯೂಝಿಲ್ಯಾಂಡ್ ಹಾಗೂ  ಅಫ್ಘಾನಿಸ್ತಾನ ನಡುವಿನ ಕುತೂಹಲಕಾರಿ ಪಂದ್ಯದ ಮೊದಲು ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳು ಟ್ವಿಟರ್‌ನಲ್ಲಿ ತಮಾಷೆಯ ಮೀಮ್‌ಗಳನ್ನು ಹರಿಬಿಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News