ಉತ್ತರಪ್ರದೇಶದ ಕಾನ್ಪುರದಲ್ಲಿ 17 ಮಕ್ಕಳ ಸಹಿತ 89 ಜನರಿಗೆ ಝಿಕಾ ವೈರಸ್
Update: 2021-11-08 15:26 IST
ಲಕ್ನೋ: ಸೊಳ್ಳೆಯಿಂದ ಏಕಾಏಕಿ ಹರಡುವ ಝಿಕಾ ವೈರಸ್ ಉತ್ತರ ಪ್ರದೇಶದ ಕಾನ್ಪುರದಲ್ಲಿ ಪತ್ತೆಯಾಗಿದ್ದು, 89 ಜನರು ಪಾಸಿಟಿವ್ ಪರೀಕ್ಷೆ ನಡೆಸಿದ್ದಾರೆ. ಅವರಲ್ಲಿ ಹದಿನೇಳು ಮಕ್ಕಳು ಹಾಗೂ ಓರ್ವ ಗರ್ಭಿಣಿ ಮಹಿಳೆ ಸೇರಿದ್ದಾರೆ.
ಕೈಗಾರಿಕಾ ನಗರದಲ್ಲಿ ಮೊದಲ ಝಿಕಾ ಪ್ರಕರಣ ಅಕ್ಟೋಬರ್ 23 ರಂದು ಪತ್ತೆಯಾಗಿದ್ದು, ಕಳೆದ ವಾರದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಕಾನ್ಪುರದಿಂದ 90 ಕಿ.ಮೀ. ದೂರದಲ್ಲಿರುವ ಕನೌಜ್‌ನಿಂದ ಒಂದು ಪ್ರಕರಣ ವರದಿಯಾಗಿದೆ. ಸಂಖ್ಯೆಯಲ್ಲಿ ಸಂಭವನೀಯ ಏರಿಕೆಯ ಬಗ್ಗೆ ಆತಂಕವಿದೆ.
ಝಿಕಾ ಪ್ರಕರಣಗಳು ಪತ್ತೆಯಾದ ಪ್ರದೇಶಗಳಲ್ಲಿ ಸಾಮೂಹಿಕ ಪರೀಕ್ಷೆಯನ್ನು ಆಯೋಜಿಸಲಾಗುತ್ತಿದೆ ಎಂದು ಕಾನ್ಪುರ ಆಡಳಿತ ತಿಳಿಸಿದೆ.