ಪೆಂಟಗನ್ ವರದಿಯಲ್ಲಿ ಉಲ್ಲೇಖಿಸಿದ್ದ ಅರುಣಾಚಲದ ಗ್ರಾಮ ಚೀನಾ ನಿಯಂತ್ರಣ ಪ್ರದೇಶದಲ್ಲಿದೆ: ಮೂಲಗಳು

Update: 2021-11-09 11:18 GMT
Twitter/@detresfa_

ಹೊಸದಿಲ್ಲಿ: ಪೆಂಟಗನ್ ವರದಿಯಲ್ಲಿ ತಿಳಿಸಿದಂತೆ ಅರುಣಾಚಲ ಪ್ರದೇಶ ಸೆಕ್ಟರ್‍ನಲ್ಲಿ ವಾಸ್ತವಿಕ ಗಡಿ ನಿಯಂತ್ರಣ ರೇಖೆ ಬಳಿ ಚೀನಾ ನಿರ್ಮಿಸಿದೆಯೆನ್ನಲಾದ ಗ್ರಾಮವು ವಾಸ್ತವವಾಗಿ ಚೀನಾ ನಿಯಂತ್ರಣದಲ್ಲಿರುವ ಪ್ರದೇಶದಲ್ಲಿದೆ ಎಂದು  ಮೂಲಗಳು ತಿಳಿಸಿವೆ.

ಅರುಣಾಚಲ ಪ್ರದೇಶದ ವಿವಾದಿತ ಪ್ರದೇಶದಲ್ಲಿ ಚೀನಾ ದೊಡ್ಡ ಗ್ರಾಮ ನಿರ್ಮಿಸಿದೆ ಎಂದು ಅಮೆರಿಕಾದ ಮಿಲಿಟರಿ ಮತ್ತು ಭದ್ರತಾ ಬೆಳವಣಿಗೆಗಳ ಇಲಾಖೆ ತನ್ನ ವಾರ್ಷಿಕ ವರದಿಯಲ್ಲಿ ಇತ್ತೀಚೆಗೆ ತಿಳಿಸಿತ್ತು.

"ಅಪ್ಪರ್ ಸುಬನಸಿರಿ ಜಿಲ್ಲೆಯ ವಿವಾದಿತ ಗಡಿ ಪ್ರದೇಶದ ಸಮೀಪದ ಈ ಗ್ರಾಮವು ಚೀನಾ ನಿಯಂತ್ರಣದಲ್ಲಿರುವ ಪ್ರದೇಶದಲ್ಲಿದೆ. ಅವರು ಅಲ್ಲಿ ಹಲವಾರು ವರ್ಷಗಳಿಂದ ಸೇನೆಯ ಪೋಸ್ಟ್ ಅನ್ನು ಹೊಂದಿದ್ದಾರೆ ಹಾಗೂ ಇಲ್ಲಿ ನಡೆದಿರುವ ಹಲವಾರು ನಿರ್ಮಾಣಗಳು ಅಲ್ಪಾವಧಿಯಲ್ಲಿ ನಡೆದುದಲ್ಲ" ಎಂದು ಮೂಲಗಳು ತಿಳಿಸಿವೆ.

ಚೀನಾವು ಸುಮಾರು ಆರು ದಶಕಗಳ ಹಿಂದೆ ಆಕ್ರಮಿಸಿಕೊಂಡಿದ್ದ ಪ್ರದೇಶದಲ್ಲಿ ಈ ಗ್ರಾಮ ನಿರ್ಮಾಣಗೊಂಡಿದೆ. 1959ರಲ್ಲಿ ಅಸ್ಸಾಂ ರೈಫಲ್ಸ್ ಪೋಸ್ಟ್ ಅನ್ನು ಬೀಳಿಸಿ ಈ ಸ್ಥಳವನ್ನು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ತನ್ನದಾಗಿಸಿತ್ತು. ಈ ಕಾರ್ಯಾಚರಣೆಯನ್ನು ಲೊಂಗ್ಜು ಘಟನೆ ಎಂದು ಹೇಳಲಾಗುತ್ತದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News