×
Ad

ನಾನು ಮೃತಪಟ್ಟಿದ್ದೇನೆಂಬ ಸುದ್ದಿ ಸುಳ್ಳು: ಕುಸ್ತಿಪಟು ನಿಶಾ ದಹಿಯಾ

Update: 2021-11-10 19:29 IST

ಹೊಸದಿಲ್ಲಿ, ನ.11: ಹರ್ಯಾಣದ ಸೋನೆಪತ್‌ನ ಹಲಾಲ್‌ಪುರ್‌ನಲ್ಲಿರುವ ಸುಶೀಲ್ ಕುಮಾರ್ ಕುಸ್ತಿ ಅಕಾಡೆಮಿಯಲ್ಲಿ ಅಪರಿಚಿತ ದುಷ್ಕರ್ಮಿಗಳಿಂದ  ನಾನು ಹಾಗೂ ನನ್ನ  ಸಹೋದರ ಹತ್ಯೆಗೀಡಾಗಿದ್ದೇವೆ ಎಂದು ಪ್ರಮುಖ ಮಾಧ್ಯಮಗಳಲ್ಲಿ ವರದಿ ವೈರಲ್ ಆದ ಹಿನ್ನೆಲೆಯಲ್ಲಿ ಬುಧವಾರ ವೀಡಿಯೊದಲ್ಲಿ ಕಾಣಿಸಿಕೊಂಡಿರುವ ರಾಷ್ಟ್ರೀಯ ಕುಸ್ತಿಪಟು ನಿಶಾ ದಹಿಯಾ "ನಾನು ಚೆನ್ನಾಗಿದ್ದೇನೆ. ನನ್ನ ಸಾವಿನ ವರದಿ ಸುಳ್ಳು''  ಎಂದು ಸ್ಪಷ್ಟಪಡಿಸಿದ್ದಾರೆ.

"ನಾನು ಸೀನಿಯರ್ ನ್ಯಾಶನಲ್ಸ್ ಟೂರ್ನಮೆಂಟ್ ನಲ್ಲಿ ಆಡಲು ಉತ್ತರಪ್ರದೇಶದ ಗೊಂಡಾದಲ್ಲಿದ್ದೇನೆ. ನಾನು ಚೆನ್ನಾಗಿದ್ದೇನೆ. ನನ್ನ ಸಾವಿನ ವರದಿ ಸುಳ್ಳು" ಎಂದು ಕುಸ್ತಿಪಟು ನಿಶಾ ದಹಿಯಾ ಅವರು ರೆಸ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.

ನಿಶಾ ದಹಿಯಾ ಅವರ ಆಪ್ತ ಗೆಳತಿ ಕುಸ್ತಿಪಟು ಸಾಕ್ಷಿ ಮಲಿಕ್, ನಿಶಾ ಅವರ ಫೋಟೊದೊಂದಿಗೆ ಟ್ವೀಟ್ ಮಾಡಿದ್ದು, ನಿಶಾ ಜೀವಂತವಾಗಿದ್ದಾಳೆ ಎಂದು ಟ್ವೀಟಿಸಿದ್ದಾರೆ.

ಹರ್ಯಾಣದಲ್ಲಿ ಬುಧವಾರ ಅಪರಿಚಿತರ ಗುಂಡಿನ ದಾಳಿಗೆ ನಿಶಾ ದಹಿಯಾ ಹಾಗೂ ಅವರ ಸಹೋದರ ಸೂರಜ್ ಮೃತಪಟ್ಟಿದ್ದು, ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ನಿಶಾ ತಾಯಿ ಧನ್ ಪತಿ ಸ್ಥಿತಿ ಚಿಂತಾಜನಕವಾಗಿದೆ ಎಂದು ಪ್ರಮುಖ ಮಾಧ್ಯಮಗಳು ವರದಿ ಮಾಡಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News