×
Ad

ವಿಶ್ವಕಪ್ ಮೊದಲ ಸೆಮಿ ಫೈನಲ್:ಫೀಲ್ಡಿಂಗ್ ಆಯ್ದುಕೊಂಡ ನ್ಯೂಝಿಲ್ಯಾಂಡ್

Update: 2021-11-10 19:39 IST

ಅಬುಧಾಬಿ, ನ.10: ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಮೊದಲ ಸೆಮಿ ಫೈನಲ್ ನಲ್ಲಿ ಇಂಗ್ಲೆಂಡ್ ವಿರುದ್ಧ ಟಾಸ್ ಜಯಿಸಿರುವ ನ್ಯೂಝಿಲ್ಯಾಂಡ್ ನಾಯಕ ಕೇನ್ ವಿಲಿಯಮ್ಸನ್ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ.

ಉಭಯ ತಂಡಗಳು ಸೂಪರ್-12ರ ಸುತ್ತಿನಲ್ಲಿ ಐದು ಪಂದ್ಯಗಳ ಪೈಕಿ ತಲಾ 4ರಲ್ಲಿ ಜಯ ಸಾಧಿಸಿ ಸೆಮಿ ಫೈನಲ್ ತಲುಪಿವೆ. ಪ್ರಶಸ್ತಿ ಫೇವರಿಟ್ ಇಂಗ್ಲೆಂಡ್ ತಂಡವು 8 ಅಂಕವನ್ನು ಗಳಿಸಿ ಗ್ರೂಪ್ 1ರಲ್ಲಿ ಅಗ್ರ ಸ್ಥಾನ ಪಡೆದಿತ್ತು. ನ್ಯೂಝಿಲ್ಯಾಂಡ್ ಗ್ರೂಪ್ 2ರಲ್ಲಿ ದ್ವಿತೀಯ ಸ್ಥಾನ ಪಡೆದಿತ್ತು.

ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ತನ್ನ ಕೊನೆಯ ಸೂಪರ್-12ರ ಸುತ್ತಿನ ಪಂದ್ಯವನ್ನು ಸೋತಿತ್ತು. ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ಆಸ್ಟ್ರೇಲಿಯ ಹಾಗೂ ಶ್ರೀಲಂಕಾ ತಂಡದ ವಿರುದ್ಧ  ಅಮೋಘ ಪ್ರದರ್ಶನ ನೀಡಿತ್ತು. ಮತ್ತೊಂದೆಡೆ ನ್ಯೂಝಿಲ್ಯಾಂಡ್ ತಂಡವು ಪಾಕಿಸ್ತಾನ ವಿರುದ್ಧ ಆಡಿದ್ದ ತನ್ನ ಮೊದಲ ಪಂದ್ಯವನ್ನು ಸೋತ ಬಳಿಕ ಭಾರತ, ಸ್ಕಾಟ್ಲೆಂಡ್, ನಮೀಬಿಯ ಹಾಗೂ ಅಫ್ಘಾನಿಸ್ತಾನದ ವಿರುದ್ಧ ಪ್ರಚಂಡ ಗೆಲುವಿನೊಂದಿಗೆ ಗೆಲುವಿನ ಹಳಿಗೆ ಮರಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News