×
Ad

ಹಬೀಬ್‌ಗಂಜ್ ರೈಲು ನಿಲ್ದಾಣವನ್ನು ರಾಣಿ ಕಮಲಾಪತಿ ಎಂದು ಮರುನಾಮಕರಣಕ್ಕೆ ಮುಂದಾದ ಮಧ್ಯಪ್ರದೇಶ

Update: 2021-11-13 13:07 IST
mage Source :INDIA TV

ಭೋಪಾಲ್: ಇತ್ತೀಚೆಗೆ ಮರು ಅಭಿವೃದ್ಧಿಪಡಿಸಿದ ಹಬೀಬ್‌ಗಂಜ್ ನಿಲ್ದಾಣವನ್ನು 18 ನೇ ಶತಮಾನದ ಗೊಂಡ ರಾಣಿ ರಾಣಿ ಕಮಲಾಪತಿ ಅವರ ಹೆಸರನ್ನು ಮರುನಾಮಕರಣ ಮಾಡುವ ಬಗ್ಗೆ ಮಧ್ಯಪ್ರದೇಶ ಸರಕಾರವು ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿದೆ.

ಬುಡಕಟ್ಟು ನಾಯಕ ಹಾಗೂ  ಸ್ವಾತಂತ್ರ್ಯ ಹೋರಾಟಗಾರ ಬಿರ್ಸಾ ಮುಂಡಾ ಅವರ ಸ್ಮರಣಾರ್ಥ ನವೆಂಬರ್ 15 ಅನ್ನು 'ಜನ ಜಾತಿಯ ಗೌರವ್ ದಿವಸ್' ಎಂದು ಆಚರಿಸುವ ಭಾರತ ಸರಕಾರದ ನಿರ್ಧಾರಕ್ಕೆ ಅನುಗುಣವಾಗಿ ನಿಲ್ದಾಣವನ್ನು ಮರುನಾಮಕರಣ ಮಾಡಲಾಗಿದೆ ಎಂದು ರಾಜ್ಯ ಸಾರಿಗೆ ಇಲಾಖೆ ಪತ್ರದಲ್ಲಿ ತಿಳಿಸಿದೆ.

ಭಾರತದಲ್ಲಿ ಪರಿಶಿಷ್ಟ ಪಂಗಡಗಳ ಹೆಮ್ಮೆಯ ಒಂದು ವಾರದ ಆಚರಣೆಯಾದ ‘ಜನಜಾತಿಯ ಗೌರವ್ ದಿವಸ್’ ಅನ್ನು ಸರಕಾರ ಆರಂಭಿಸುವ ದಿನವಾದ ನವೆಂಬರ್ 15 ರಂದು 100 ಕೋಟಿ ರೂಪಾಯಿ ವೆಚ್ಚದಲ್ಲಿ ಮರುಅಭಿವೃದ್ಧಿಗೊಳಿಸಲಾದ ನಿಲ್ದಾಣವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

ಅಲಹಾಬಾದ್ ರೈಲು ನಿಲ್ದಾಣದ ಹೆಸರನ್ನು ಪ್ರಯಾಗ್ ರಾಜ್ ಎಂದು ಬದಲಾಯಿಸಲಾಗಿದೆ ಹಾಗೂ  ಮುಘಲ್ಸರಾಯ್ ರೈಲ್ವೆ ಜಂಕ್ಷನ್ ರಾಸ್ ಅನ್ನು ಪಂ. ದೀನ್ ದಯಾಳ್ ಉಪಾಧ್ಯಾಯ ಜಂಕ್ಷನ್ ಎಂದು ಮರುನಾಮಕರಣ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News