ಪಾಕ್-ಅಫ್ಘಾನ್ ಗಡಿಭಾಗದಲ್ಲಿ ಸ್ಫೋಟ: 2 ಪೊಲೀಸ್ ಸಿಬ್ಬಂದಿ ಮೃತ್ಯು, 6 ಮಂದಿಗೆ ಗಾಯ

Update: 2021-11-13 18:42 GMT

ಇಸ್ಲಮಾಬಾದ್, ನ.13: ಉತ್ತರ ಪಾಕಿಸ್ತಾನ- ಅಫ್ಘಾನಿಸ್ತಾನದ ಗಡಿಭಾಗದ ಸಮೀಪ ಶನಿವಾರ ಸುಧಾರಿತ ಸ್ಫೋಟಕ ಸಾಧನ ಬಳಸಿ ನಡೆಸಿದ ದಾಳಿಯಲ್ಲಿ ಇಬ್ಬರು ಪೊಲೀಸರು ಮೃತರಾಗಿದ್ದು ಬಾಲಕಿ ಸಹಿತ 6 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ತೆಹ್ರೀಕ್-ಇ- ತಾಲಿಬಾನ್ (ಟಿಟಿಪಿ) ಸಂಘಟನೆ ಹಾಗೂ ಸರಕಾರದ ನಡುವೆ ಯುದ್ಧವಿರಾಮ ಒಪ್ಪಂದ ಏರ್ಪಟ್ಟ ಬಳಿಕ ಈ ದಾಳಿ ನಡೆದಿದೆ. ಆದರೆ ತಾನು ಯುದ್ಧವಿರಾಮ ಒಪ್ಪಂದಕ್ಕೆ ಬದ್ಧವಾಗಿದ್ದು ಸ್ಫೋಟಕ್ಕೆ ತಾನು ಹೊಣೆಯಲ್ಲ ಎಂದು ಟಿಟಿಪಿ ವಕ್ತಾರರು ಪ್ರತಿಕ್ರಿಯಿಸಿದ್ದಾರೆ. ಗಡಿ ಭಾಗದ ಖೈಬರ್ ಪಖ್ತುಂಕ್ವಾ ಪ್ರಾಂತದಲ್ಲಿ ಗಸ್ತು ತಿರುಗುತ್ತಿದ್ದ ಸುಧಾರಿತ ಸ್ಫೋಟಕ ಸಾಧನ(ಇಎಲ್‌ಡಿ) ಸ್ಫೋಗೊಂಡಿದ್ದು ಇಬ್ಬರು ಪೊಲೀಸರು ಮೃತಪಟ್ಟಿದ್ದಾರೆ. ಪೊಲೀಸರು ಗಸ್ತುತಿರುಗುವ ಸ್ಥಳದಲ್ಲಿದ್ದ ಮೋಟರ್‌ಬೈಕ್‌ನಲ್ಲಿ ಇಎಲ್‌ಡಿ ಇರಿಸಲಾಗಿತ್ತು. ಇನ್ನೊಂದು ಸ್ಫೋಟ ಬಲೂಚಿಸ್ತಾನ ಪ್ರಾಂತದ ಖ್ವೆಟಾ ನಗರದ ಹೊರವಲಯದಲ್ಲಿ ಸಂಭವಿಸಿದ್ದು ಬಾಲಕಿ, ಮೂವರು ಮಹಿಳೆಯರ ಸಹಿತ ಐದು ಮಂದಿ ಹಾಗೂ ಪೊಲೀಸ್ ಸಿಬಂದಿ ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಬ್ದುಲ್ ಸಮದ್ ಖಾನ್‌ರನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News