×
Ad

ಪಂಜಾಬ್ ಚುನಾವಣೆ: ನಟ ಸೋನು ಸೂದ್ ಸಹೋದರಿ ಸ್ಪರ್ಧೆ

Update: 2021-11-14 11:32 IST

ಹೊಸದಿಲ್ಲಿ: ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಪಂಜಾಬ್ ಚುನಾವಣೆಯಲ್ಲಿ ತನ್ನ ಸಹೋದರಿ ಮಾಳವಿಕಾ ಸೂದ್ ಸ್ಪರ್ಧಿಸಲಿದ್ದಾರೆ ಎಂದು ನಟ ಸೋನು ಸೂದ್ ರವಿವಾರ ಘೋಷಿಸಿದರು. ಆದರೆ ಪಕ್ಷದ ಆಯ್ಕೆಯ ಬಗ್ಗೆ ಅವರು ತುಟಿ ಬಿಚ್ಚಿಲ್ಲ.

ರಾಜ್ಯ ರಾಜಧಾನಿ ಚಂಡೀಗಡದಿಂದ ಸುಮಾರು 170 ಕಿ.ಮೀ. ದೂರದಲ್ಲಿರುವ ಮೊಗಾದಲ್ಲಿ ರವಿವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ನಟ ಈ ಘೋಷಣೆ ಮಾಡಿದರು.

ಸೂದ್ ಇತ್ತೀಚೆಗೆ ಪಂಜಾಬ್ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿ ಅವರನ್ನು ಭೇಟಿ ಮಾಡಿದ್ದರು.

ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸಿದ್ದ ಸೂದ್ ತಮ್ಮ ಕಾರ್ಯಕ್ಕೆ ಭಾರೀ ಪ್ರಶಂಸೆಗೆ ಒಳಗಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News