ತನ್ನ ಉದ್ಯೋಗಿಗಳು ಮನೆಯಿಂದ ಕೆಲಸ ಮಾಡುವುದರಿಂದ ಪ್ರಯೋಜನವಿಲ್ಲ: ಸುಪ್ರೀಂಕೋರ್ಟ್ ಗೆ ತಿಳಿಸಿದ ಕೇಂದ್ರ

Update: 2021-11-17 05:34 GMT

ಹೊಸದಿಲ್ಲಿ: ತನ್ನ ಉದ್ಯೋಗಿಗಳು ಮನೆಯಿಂದ ಕೆಲಸ ಮಾಡುವ ಪರವಾಗಿಲ್ಲ. ಇದು ಹೆಚ್ಚು ಪ್ರಯೋಜನ ಹಾಗೂ  ಪರಿಣಾಮಕಾರಿಯಾಗಿಲ್ಲ ಎಂದು ದಿಲ್ಲಿ ಹಾಗೂ ನೆರೆಹೊರೆಯ ನಗರಗಳಲ್ಲಿನ ವಾಯು ಮಾಲಿನ್ಯದ ಕುರಿತು ವಿಚಾರಣೆಗೆ ಮುಂಚಿತವಾಗಿ ಅಫಿಡವಿಟ್‌ನಲ್ಲಿ ಕೇಂದ್ರ ಸರಕಾರವು ಸುಪ್ರೀಂ ಕೋರ್ಟ್‌ಗೆ ಇಂದು ತಿಳಿಸಲಾಗಿದೆ.

ಸರಕಾರವು ತನ್ನ ಅಫಿಡವಿಟ್‌ನಲ್ಲಿ, "... ಇತ್ತೀಚಿನ ದಿನಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ  ಹಲವಾರು ಸರಕಾರಿ ಕಾರ್ಯಗಳ ಮೇಲೆ  ಗಣನೀಯವಾಗಿ ದೀರ್ಘಾವಧಿಯವರೆಗೆ ಪರಿಣಾಮ ಬೀರಿವೆ. ಇದು ಇಡೀ ದೇಶದ ಮೇಲೆ ಪರಿಣಾಮ ಉಂಟು ಮಾಡಿತು ಎಂದಿದೆ.

ಆದಾಗ್ಯೂ, ಕೇಂದ್ರವು "ಕಾರ್ಪೂಲಿಂಗ್ ಕುರಿತು ತನ್ನ ಉದ್ಯೋಗಿಗಳಿಗೆ ಸಲಹೆಯನ್ನು ನೀಡಿದೆ" ಎಂದು ಹೇಳಿದೆ.

ತನ್ನ ಉದ್ಯೋಗಿಗಳಿಗೆ ಕನಿಷ್ಠ ಒಂದು ವಾರದವರೆಗೆ ಮನೆಯಿಂದ ಕೆಲಸ ಮಾಡಲು ಪರಿಗಣಿಸುವಂತೆ  ಕಳೆದ ವಿಚಾರಣೆಯಲ್ಲಿ  ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಸುಪ್ರೀಂ ಕೋರ್ಟ್ ಸಲಹೆ ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News