​ತನ್ನ ಪ್ರಯಾಣ ಸಲಹೆಯಲ್ಲಿ ಭಾರತದಲ್ಲಿನ ಲೈಂಗಿಕ ದೌರ್ಜನ್ಯವನ್ನು ಪ್ರಧಾನವಾಗಿ ಬಿಂಬಿಸಿದ ಅಮೆರಿಕ

Update: 2021-11-17 18:05 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಭಾರತಕ್ಕೆ ಬರುವ ಅಮೆರಿಕನ್ ಪ್ರಯಾಣಿಕರಿಗೆ ತನ್ನ ಇತ್ತೀಚಿನ ಪ್ರಯಾಣ ಸಲಹೆಯಲ್ಲಿ ಅಮೆರಿಕಾವು "ಅತ್ಯಾಚಾರ" ಪ್ರಕರಣವನ್ನು ಒಂದು ಪ್ರಮುಖ ಕಳವಳ ಎಂದು ಬಿಂಬಿಸಿದೆ.  ಆ ಮೂಲಕ ಭಾರತವನ್ನು ಪ್ರಯಾಣದ ಗಮ್ಯಸ್ಥಾನಗಳ ಲೆವೆಲ್ 2 ವರ್ಗಕ್ಕೆ ಸೇರಿಸಿದೆ ಎಂದು theprint.in ವರದಿ ಮಾಡಿದೆ.

ನವೆಂಬರ್ 15 ರಂದು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ನಲ್ಲಿ ಬ್ಯೂರೋ ಆಫ್ ಕಾನ್ಸುಲರ್ ಅಫೇರ್ಸ್ ಹೊರಡಿಸಿದ ಸಲಹೆಯಲ್ಲಿ  ಭಾರತಕ್ಕೆ ಪ್ರಯಾಣಿಸುವಾಗ "ಹೆಚ್ಚಿನ ಎಚ್ಚರಿಕೆ" ವಹಿಸುವಂತೆ  ಅಮೆರಿಕದ ಪ್ರಯಾಣಿಕರನ್ನು ಕೇಳಿಕೊಂಡಿದೆ, "ಲೈಂಗಿಕ ದೌರ್ಜನ್ಯದಂತಹ ಹಿಂಸಾತ್ಮಕ ಅಪರಾಧಗಳು, ಪ್ರವಾಸಿ ತಾಣಗಳಲ್ಲಿ ಹಾಗೂ  ಇತರ ಸ್ಥಳಗಳಲ್ಲಿ ಸಂಭವಿಸಿದೆ” ಎಂದು ಹೇಳಿದೆ.

“ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಅಪರಾಧಗಳಲ್ಲಿ ಅತ್ಯಾಚಾರವು ಒಂದಾಗಿದೆ ಎಂದು ಭಾರತದ ಅಧಿಕಾರಿಗಳು ವರದಿ ಮಾಡಿದ್ದಾರೆ. ಲೈಂಗಿಕ ದೌರ್ಜನ್ಯದಂತಹ ಹಿಂಸಾತ್ಮಕ ಅಪರಾಧವು ಪ್ರವಾಸಿ ತಾಣಗಳಲ್ಲಿ ಹಾಗೂ ಇತರ ಸ್ಥಳಗಳಲ್ಲಿ ಸಂಭವಿಸಿದೆ" ಎಂದು ಸಲಹೆ ತಿಳಿಸಿದೆ.

ಭಾರತಕ್ಕೆ ತನ್ನ ಪ್ರಯಾಣ ಸಲಹೆಗಳಲ್ಲಿ ಅಮೆರಿಕವು ಲೈಂಗಿಕ ದೌರ್ಜನ್ಯವನ್ನು ಒಂದು ಕಳವಳವಾಗಿ ಬಿಂಬಿಸುತ್ತಿರುವುದು ಇದೇ ಮೊದಲಲ್ಲ. 2018 ಹಾಗೂ 2019 ರಲ್ಲಿ ಇದನ್ನು ಮೊದಲು ಹೈಲೈಟ್ ಮಾಡಲಾಗಿತ್ತು, ಅಮೆರಿಕದ ಮಹಿಳಾ ಪ್ರಯಾಣಿಕರಿಗೆ ಎಚ್ಚರಿಕೆ ವಹಿಸಲು ತಿಳಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News