ವಿಕಿಪೀಡಿಯಾದಲ್ಲಿ ಕಾಮಿಡಿಯನ್ ವೀರ್ ದಾಸ್ ರನ್ನು 'ವೀರ್ ಅಬ್ದುಲ್ಲಾ ದಾಸ್' ಆಗಿಸಿದ ಅನಾಮಿಕ ವ್ಯಕ್ತಿ !

Update: 2021-11-19 13:31 GMT

 ಹೊಸದಿಲ್ಲಿ: 'ಟೂ ಇಂಡಿಯಾಸ್' ಹೇಳಿಕೆ ಮೂಲಕ ಖ್ಯಾತ ಕಾಮಿಡಿಯನ್ ವೀರ್ ದಾಸ್ ವಿವಾದಕ್ಕೀಡಾದ ಬೆನ್ನಲ್ಲೇ ವಿಕಿಪೀಡಿಯಾ ಪುಟದಲ್ಲಿ ಅವರ ಹೆಸರು 'ವೀರ್ ಅಬ್ದುಲ್ಲಾ ದಾಸ್' ಎಂದು ಬರೆದಿರುವುದು  ಸಾಕಷ್ಟು ಸುದ್ದಿಯಾಗಿದೆಯಲ್ಲದೆ ಈ ನಿರ್ದಿಷ್ಟ ಪುಟ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಇದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದು theprint.in ವರದಿ ಮಾಡಿದೆ.

ಓರ್ವ ಅನಾಮಿಕ ವ್ಯಕ್ತಿ ದಾಸ್ ಅವರ ವಿಕಿಪೀಡಿಯಾ ಪುಟವನ್ನು ಎಡಿಟ್ ಮಾಡಿ "ವೀರ್ ಅಬ್ದುಲ್ಲಾ ದಾಸ್ ಓರ್ವ ಪಾಕಿಸ್ತಾನಿ ಭಾರತೀಯ ಮುಸ್ಲಿಂ ಕಾಮಿಡಿಯನ್, ನಟ ಮತ್ತು ಸಂಗೀತಕಾರ, ಅವರಿಗೆ ತಂದೆಯ ಬಗ್ಗೆ ಗೊತ್ತಿಲ್ಲ, ಅವರಿಗೆ ಹಲವು ಜನರ ಬಗ್ಗೆ ಸಂಶಯವಿದೆ ಹಾಗೂ 12ನೇ ವಯಸ್ಸಿನಲ್ಲಿ ಅವರು ತಮ್ಮ ಸಹೋದರಿಯನ್ನು ಗರ್ಭವತಿಯಾಗಿಸಿ ಜೈಲಿಗೆ ಹೋಗಿದ್ದರು" ಎಂದು ಅಸಂಬದ್ಧವಾಗಿ, ತೀರಾ ಕೆಳಮಟ್ಟದಲ್ಲಿ ಬರೆಯಲಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಇದನ್ನೇ ಆಧಾರವಾಗಿಟ್ಟುಕೊಂಡು ಹಲವು ಟ್ವಿಟ್ಟರಿಗರು ವೀರ್ ದಾಸ್ ಅವರ ಬಗ್ಗೆ ಅವಮಾನಕರ ಟ್ವೀಟ್‍ಗಳನ್ನು  ಮಾಡಿದ್ದಾರೆ.

ವಾಸ್ತವವೇನು?

ವಿಕಿಪೀಡಿಯಾ ವೆಬ್‍ಸೈಟ್ ಪ್ರಕಾರ ದಾಸ್ ಅವರ ಪುಟವನ್ನು ನವೆಂಬರ್ 17ರಂದು ಮ್ಯುಸಿಕ್‍ಬಾಟ್ ಎಂಬ ವ್ಯಕ್ತಿ ಎಡಿಟ್ ಮಾಡಿದ್ದರು. ಆದರೆ  ಅದರಲ್ಲಿ ಬರೆದಿರುವುದು ಯಾವುದೂ ನಿಜವಲ್ಲ. ವೀರ್ ದಾಸ್ ಅವರು ಡೆಹ್ರಾಡೂನ್‍ನಲ್ಲಿ 1979ರಲ್ಲಿ ರಾನು ದಾಸ್ ಹಾಗೂ ಮಧುರ್ ದಾಸ್ ದಂಪತಿಗಳಿಗೆ ಜನಸಿದ್ದರು. ಅವರ ತಂದೆ ಭಾರತೀಯ ಆಹಾರ ಸಂಸ್ಕರಣಾ ಕಂಪೆನಿಯೊಂದಕ್ಕೆ ಕೆಲಸ ಮಾಡುತ್ತಿದ್ದರೆ ತಾಯಿ ನೈಜೀರಿಯಾದ ಲಾಗೋಸ್‍ನಲ್ಲಿ ಶಿಕ್ಷಕಿಯಾಗಿದ್ದರು.

ಎಡಿಟ್ ಮಾಡಲಾದ ವಿಕಿಪೀಡಿಯಾ ಪುಟವನ್ನು ಈಗ ತಿದ್ದಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News