ಎಂಟಿಎನ್‌ಎಲ್, ಬಿಎಸ್‌ಎನ್‌ಎಲ್‌ನ 970 ಕೋ.ರೂ. ಸೊತ್ತು ಮಾರಾಟಕ್ಕಿರಿಸಿದ ಕೇಂದ್ರ ಸರಕಾರ

Update: 2021-11-20 16:47 GMT

ಹೊಸದಿಲ್ಲಿ, ನ. 20: ರಾಷ್ಟ್ರ ಸ್ವಾಮಿತ್ವದ ಟೆಲಿಕಾಂ ಸಂಸ್ಥೆಗಳಾದ ಎಂಟಿಎನ್‌ಎಲ್ ಹಾಗೂ ಬಿಎಸ್‌ಎನ್‌ಎಲ್‌ನ ರಿಯಲ್ ಎಸ್ಟೇಟ್ ಸೊತ್ತುಗಳನ್ನು ಮೀಸಲು ಬೆಲೆ ಸುಮಾರು 970 ಕೋಟಿ ರೂಪಾಯಿಗೆ ಮಾರಾಟ ಮಾಡಲು ಕೇಂದ್ರ ಸರಕಾರ ಪಟ್ಟಿ ಮಾಡಿದೆ ಎಂದು ಡಿಐಪಿಎಎಂ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ದಾಖಲೆಗಳು ತಿಳಿಸಿವೆ. ಹೈದರಾಬಾದ್, ಚಂಡಿಗಢ, ಭಾವನಗರ್ ಹಾಗೂ ಕೋಲ್ಕತ್ತಾದಲ್ಲಿರುವ ಬಿಎಸ್‌ಎನ್‌ಎಲ್ ಸೊತ್ತುಗಳನ್ನು ಮೀಸಲು ಬೆಲೆ ಸುಮಾರು 660 ಕೋಟಿ ರೂಪಾಯಿಗೆ ಮಾರಾಟ ಮಾಡುವುದಾಗಿ ವೆಬ್‌ಸೈಟ್‌ನಲ್ಲಿ ಪೋಸ್ಟ್ ಹಾಕಲಾಗಿದೆ. ಮುಂಬೈಯ ಗುರುಗಾಂವ್‌ನ ವಾಸರಿ ಹಿಲ್‌ನಲ್ಲಿರುವ ಎಂಟಿಎನ್‌ಎಲ್‌ನ ಸೊತ್ತನ್ನು ಮೀಸಲು ಬೆಲೆ ಸುಮಾರು 310 ಕೋಟಿ ರೂಪಾಯಿಗೆ ಮಾರಾಟ ಮಾಡಲು ಹೂಡಿಕೆ ಹಾಗೂ ಸಾರ್ವಜನಿಕ ಸೊತ್ತು ನಿರ್ವಹಣೆ ಇಲಾಖೆ (ಡಿಐಪಿಎಎಂ) ವೆಬ್‌ಸೈಟ್‌ನಲ್ಲಿ ಪಟ್ಟಿ ಮಾಡಿದೆ. ಕಂಪೆನಿಯ ಸೊತ್ತನ್ನು ಹಣವಾಗಿ ಪರಿವರ್ತಿಸುವ ಯೋಜನೆಯ ಭಾಗವಾಗಿ ಓಶಿವಾರದಲ್ಲಿರುವ ಎಂಟಿಎನ್‌ಎಲ್‌ನ 20 ಫ್ಲಾಟ್‌ಗಳನ್ನು ಮಾರಾಟಕ್ಕೆ ಇರಿಸಲಾಗಿದೆ. ಎಂಟಿಎನ್‌ಎಲ್ ಸೊತ್ತಿನ ಈ-ಹರಾಜು ಡಿಸೆಂಬರ್ 14ರಂದು ನಡೆಯಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News