70 ಕಿ.ಮೀ.ಗೂ ಅಧಿಕ ದೂರ ಪ್ರಯಾಣಿಸಿ ವಾರಸುದಾರರಿಗೆ ಕಳೆದುಹೋದ ಚಿನ್ನಾಭರಣಗಳನ್ನು ಮರಳಿಸಿದ ಕಾಶ್ಮೀರಿ ಯುವಕರು

Update: 2021-11-23 06:14 GMT

ಹೊಸದಿಲ್ಲಿ: ಬೆಲೆಬಾಳುವ ವಸ್ತುಗಳು ಕಳೆದುಹೋದ ನಂತರ ಅವುಗಳು ವಾಪಸ್ ದೊರೆಯುವುದು ಬಹಳ ಅಪರೂಪ. ಆದರೆ ವಾಪಸ್ ದೊರೆತರೆ ಅಂತಹವರು ಅದೃಷ್ಟವಂತರೆಂದೇ ತಿಳಿಯಬೇಕು. ಇಂತಹ ಅದೃಷ್ಟ ಸೂರತ್‌ನ ಕುಟುಂಬವೊಂದಕ್ಕೂ ಲಭಿಸಿದೆ.

ಕಾಶ್ಮೀರದ ಪಹಲ್ಗಾಮ್ ಎಂಬಲ್ಲಿ ಪ್ರವಾಸಿಗರಿಗೆ ಕುದುರೆ ಸವಾರಿ ಸೇವೆ ಒದಗಿಸುವ ರಫೀಖ್ ಮತ್ತು ಅಫ್ರೋಝ್ 70 ಕಿಮೀಗೂ ಅಧಿಕ ದೂರವಿರುವ ಶ್ರೀನಗರಕ್ಕೆ ಪ್ರಯಾಣಿಸಿ ಪ್ರವಾಸಿಗರ ಚಿನ್ನಾಭರಣಗಳನ್ನು ಮರಳಿಸಿದ್ದಾರೆ.

ಈ ಸೂರತ್ ಮೂಲದ ಕುಟುಂಬವು ಕುದುರೆ ಸವಾರಿ ವೇಳೆ ತಮ್ಮ ಚಿನ್ನಾಭರಣಗಳನ್ನು ಮರೆತುಬಿಟ್ಟಿತ್ತು ಎನ್ನಲಾಗಿದೆ.

"ನಮ್ಮ ಕ್ಯಾಬ್ ಚಾಲಕರಾದ ತಾಹಿಲ್ ಮತ್ತು ಬಿಲಾಲ್ ಬಹಳಷ್ಟು ಶ್ರಮಪಟ್ಟು ಇಬ್ಬರ ದೂರವಾಣಿ ಸಂಖ್ಯೆಗಳನ್ನು ಪಡೆದರು. ನಾವು ಅವರಿಗೆ ಕರೆ ಮಾಡಿದಾಗ ಪಹಲ್ಗಾಮ್‌ನಿಂದ ಶ್ರೀನಗರಕ್ಕೆ 70 ಕಿಮೀಗೂ ಅಧಿಕ ದೂರ ಪ್ರಯಾಣಿಸಿ ಚಿನ್ನಾಭರಣಗಳನ್ನು ಮರಳಿಸಿದ್ದಾರೆ,'' ಎಂದು ಬೆಲೆಬಾಳುವ ವಸ್ತುಗಳು ವಾಪಸ್ ದೊರೆತ ಸಂತಸದಲ್ಲಿದ್ದ ಕುಟುಂಬ ಸದಸ್ಯರು ಹೇಳಿದ್ದಾರಲ್ಲದೆ ರಫೀಖ್ ಮತ್ತು ಅಫ್ರೋಝ್ ಅವರ ಪ್ರಾಮಾಣಿಕತೆಯನ್ನು ಮೆಚ್ಚಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News