ಸುರತ್ಕಲ್‌: ಸೆಲ್ಫಿ ತೆಗೆಯಲು ಗೂಡ್ಸ್ ರೈಲಿನ ಮೇಲೆ ಹತ್ತಿದ ಯುವಕನಿಗೆ ವಿದ್ಯುತ್ ಆಘಾತ

Update: 2021-11-23 17:43 GMT

ಸುರತ್ಕಲ್: ಗೂಡ್ಸ್ ರೈಲಿನ ಮೇಲೆ ಹತ್ರಿ ಸೆಲ್ಫಿ ತೆಗೆಯಲು ಹೋದ ಮಂಗಳೂರು ಮೂಲದ ಯುವಕನೊಬ್ಬ ವಿದ್ಯುತ್ ಆಘಾತಕ್ಕೆ ಈಡಾದ ಘಟನೆ ಸುರತ್ಕಲ್ ರೈಲ್ವೆ ಸ್ಟೇಷನ್ ನಿಲ್ದಾಣ ಸಮೀಪದ ಅಗರಮೇಲು ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ.

ಮಂಗಳೂರಿನ‌ ಸಲ್ಮಾನ್ ಪಾರಿಸ್ (21) ವಿದ್ಯುತ್ ಅವಘಡಕ್ಕೆ ಒಳಗಾದ ಯುವಕನಾಗಿದ್ದಾನೆ.‌ 

ನಿಲುಗಡೆಗೊಂಡಿದ್ದ ಗೂಡ್ಸ್ ರೈಲಿನ ಮೇಲೆ ಹತ್ರಿದ ಸಲ್ಮಾನ್ ಫಾರಿಸ್ ಸೆಲ್ಫಿ ತೆಗೆಯಲು ಮುಂದಾದ. ಆದರೆ ಪಕ್ಕದಲ್ಲಿದ್ದ  ಹೈವೋಲ್ಟೇಜ್ ತಂತಿಗಳನ್ನು ಗಮನಿಸದ ಕಾರಣ ವಿದ್ಯುತ್ ಶಾಕ್ ಆಘಾತಕ್ಕೀಡಾಗಿ ಭಾಗಶಃ ಸುಟ್ಟು ಹೋಗಿದ್ದಾನೆ ಎಂದು ತಿಳಿದು ಬಂದಿದೆ.

ಗಾಯಗೊಂಡ ಯುವಕನನ್ನು‌ ಖಾಸಗಿ‌ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News