ಎಲ್ಲ ಖಾಸಗಿ ಕ್ರಿಪ್ಟೋಕರೆನ್ಸಿ ನಿಷೇಧ: ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆ ಸಾಧ್ಯತೆ

Update: 2021-11-23 17:20 GMT

ಹೊಸದಿಲ್ಲಿ: ಈ ಬಾರಿಯ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರಕಾರವು 29 ಮಸೂದೆಗಳನ್ನು ಮಂಡಿಸುತ್ತಿದ್ದು, ಈ ಪೈಕಿ ಖಾಸಗಿ ಕ್ರಿಪ್ಟೋ ಕರೆನ್ಸಿಗಳನ್ನು ನಿಷೇಧಿಸುವ ಮಸೂದೆಯೂ ಸೇರಿದೆ ಎಂದು ವರದಿಯಾಗಿದೆ.

ಆರ್ ಬಿಐನಿಂದ ಅಧಿಕೃತ ಡಿಜಿಟಲ್ ಕರೆನ್ಸಿ ಬಿಡುಗಡೆಗೆ ಬೇಕಾದ ನಿಯಮಾವಳಿ ರಚಿಸುವ ಮೂಲಕ ಭಾರತದಲ್ಲಿನ ಎಲ್ಲ ಖಾಸಗಿ ಕ್ರಿಪ್ಟೋಕರೆನ್ಸಿ ನಿಯಂತ್ರಣ ಮಸೂದೆ-2021 ಅನ್ನು ಸಂಸತ್ತಿನ ಅಧಿವೇಶನದಲ್ಲಿ ಮಂಡಿಸಲು ತಾತ್ಕಾಲಿಕ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ANI ಟ್ವೀಟ್ ಮಾಡಿದೆ.

ಮುಂದಿನ ಸೋಮವಾರದಿಂದ ಸಂಸತ್ತಿನ ಅಧಿವೇಶನ  ಆರಂಭವಾಗುತ್ತಿದ್ದು, ಡಿಸೆಂಬರ್ 23ಕ್ಕೆ ಅದು ಕೊನೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News