×
Ad

ಗುಜರಾತ್ ಗುಟ್ಕಾ ವಿತರಕರಲ್ಲಿ 100 ಕೋ.ರೂ. ಅಘೋಷಿತ ಆದಾಯ ಪತ್ತೆ

Update: 2021-11-23 23:29 IST

ಅಹಮದಾಬಾದ್: ಗುಜರಾತ್ ಮೂಲದ ಗುಟ್ಕಾ ವಿತರಕರೊಬ್ಬರಿಗೆ ಸೇರಿದ ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ಶೋಧದ ವೇಳೆ 100 ಕೋಟಿ ರೂ.ಗೂ ಅಧಿಕ ಅಘೋಷಿತ ಆದಾಯ ಪತ್ತೆಯಾಗಿದೆ ಎಂದು NDTV ವರದಿ ಮಾಡಿದೆ. 

ಸರಕಾರ ಹೊರಡಿಸಿದ ಹೇಳಿಕೆಯ ಪ್ರಕಾರ  ಆದಾಯ ತೆರಿಗೆ ಅಧಿಕಾರಿಗಳು ನವೆಂಬರ್ 16 ರಂದು ಅಹಮದಾಬಾದ್‌ನಲ್ಲಿ ಗುಟ್ಕಾ ವಿತರಕರ ಕನಿಷ್ಠ 15 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಹೇಳಿಕೆಯಲ್ಲಿ ಗ್ರೂಪ್ ಹೆಸರನ್ನು ಬಹಿರಂಗಪಡಿಸಲಾಗಿಲ್ಲ.

ದಾಳಿ ವೇಳೆ ಸುಮಾರು  7.5 ಕೋಟಿ ರೂ. ಮೌಲ್ಯದ ಲೆಕ್ಕಕ್ಕೆ ಸಿಗದ ನಗದು ಹಾಗೂ  4 ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. 30 ಕೋಟಿ ರೂ. ಮೌಲ್ಯದ ಅಘೋಷಿತ ಆದಾಯವನ್ನು ಹೊಂದಿರುವುದನ್ನು ಸಮೂಹ ಒಪ್ಪಿಕೊಂಡಿದೆ ಎಂದು ಸರಕಾರದ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News