×
Ad

ಬಾಂಗ್ಲಾದೇಶದ ಟ್ವೆಂಟಿ-20 ನಾಯಕ ಮಹ್ಮೂದುಲ್ಲಾ ಟೆಸ್ಟ್ ಕ್ರಿಕೆಟಿನಿಂದ ನಿವೃತ್ತಿ

Update: 2021-11-24 20:23 IST
Photo: twitter

ಢಾಕಾ: ಬಾಂಗ್ಲಾದೇಶದ ಟ್ವೆಂಟಿ-20 ತಂಡದ ನಾಯಕ ಮಹ್ಮೂದುಲ್ಲಾ ರಿಯಾದ್ ಬುಧವಾರ ತಮ್ಮ 35ನೇ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಮಹ್ಮೂದುಲ್ಲಾ ಅವರು ಹಿರಿಯ ರಾಷ್ಟ್ರೀಯ ತಂಡಕ್ಕಾಗಿ ಏಕದಿನ ಹಾಗೂ ಟ್ವೆಂಟಿ-20 ಪಂದ್ಯಗಳನ್ನು  ಆಡುವುದನ್ನು ಮುಂದುವರಿಸಲಿದ್ದಾರೆ.

ಆಲ್ ರೌಂಡರ್ ಸಾಮಾಜಿಕ ಮಾಧ್ಯಮದ ಮೂಲಕ ಟೆಸ್ಟ್ ಕ್ರಿಕೆಟ್ ನಿಂದ  ನಿವೃತ್ತಿ ನಿರ್ಧಾರ ಪ್ರಕಟಿಸಿದರು.

ಮಹ್ಮೂದುಲ್ಲಾ 50 ಟೆಸ್ಟ್‌ಗಳಲ್ಲಿ 5 ಶತಕ ಹಾಗೂ  16 ಅರ್ಧಶತಕ ಸೇರಿದಂತೆ 2,914 ರನ್ ಗಳಿಸಿದ್ದಾರೆ. ಅವರು 2009 ರಲ್ಲಿ  ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು ಹಾಗೂ  ಜುಲೈ 2021 ರಲ್ಲಿ ಬಾಂಗ್ಲಾದೇಶದ ಝಿಂಬಾಬ್ವೆ ಪ್ರವಾಸದ ಸಮಯದಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು.

ವಾಸ್ತವವಾಗಿ  ಮಹ್ಮೂದುಲ್ಲಾ ಅವರು 2021 ರಲ್ಲಿ ಹರಾರೆ ಟೆಸ್ಟ್‌ನಲ್ಲಿ ತಮ್ಮ ಅತ್ಯಧಿಕ ವೈಯಕ್ತಿಕ ಟೆಸ್ಟ್ ಸ್ಕೋರ್  ಔಟಾಗದೆ 150 ರನ್ ಗಳಿಸಿ  ಪಂದ್ಯಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು. ಇದು ಅವರ ಕೊನೆಯ ಟೆಸ್ಟ್ ಪಂದ್ಯವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News