ಸ್ವೀಡನ್‌ನ ಪ್ರಥಮ ಮಹಿಳಾ ಪ್ರಧಾನಿಯಾಗಿ ಆಯ್ಕೆಯಾದ 12 ಗಂಟೆಯಲ್ಲೇ ರಾಜೀನಾಮೆ ನೀಡಿದ ಮ್ಯಾಗ್ದಲಿನಾ ಆ್ಯಂಡರ್ಸನ್

Update: 2021-11-25 05:29 GMT
ಮ್ಯಾಗ್ದಲಿನಾ ಆ್ಯಂಡರ್ಸನ್ (Photo: Twitter/@swedense)

ಸ್ಟಾಕ್‌ಹೋಂ, ನ.24: ಸೋಷಿಯಲ್ ಡೆಮಾಕ್ರಟಿಕ್ ಪಕ್ಷದ ನಾಯಕಿ ಹಾಗೂ ಹಾಲಿ ವಿತ್ತಸಚಿವೆ ಮ್ಯಾಗ್ದಲಿನಾ ಆ್ಯಂಡರ್ಸನ್ ಸ್ವೀಡನ್‌ನ ಪ್ರಧಾನ ಮಂತ್ರಿ ಪದವಿಗೇರಿದ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರವಾದ 12 ಗಂಟೆಗಳ ನಂತರ ತಮ್ಮ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದಾರೆ.

ಮ್ಯಾಗ್ಡಲಿನಾ ಆಂಡರ್ಸನ್ ಅವರು ಸಂಸತ್ತಿನ ಸ್ಪೀಕರ್‌ಗೆ ತಾನು ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಿ ಒಂದೇ ಪಕ್ಷದ ಸರಕಾರದ ಮುಖ್ಯಸ್ಥೆಯಾಗಿ ನೇಮಕಗೊಳ್ಳುವ ಭರವಸೆ ಹೊಂದಿದ್ದೇನೆ ಎಂದು ಹೇಳಿದ್ದಾರೆ.

ಸಂಸತ್ತು ಒಕ್ಕೂಟದ ಬಜೆಟ್ ಮಸೂದೆಯನ್ನು ತಿರಸ್ಕರಿಸಿದ ನಂತರ ಗ್ರೀನ್ ಪಾರ್ಟಿ ಮೈತ್ರಿಯನ್ನು ಕಡಿದುಕೊಂಡಿತ್ತು.

''ಪ್ರಧಾನಿ ಹುದ್ದೆಯಿಂದ ಮುಕ್ತಗೊಳಿಸುವಂತೆ ಸ್ಪೀಕರ್‌ಗೆ ನಾನು ಮನವಿ ಮಾಡಿದ್ದೇನೆ. ನಾನು ಏಕೈಕ ಪಕ್ಷವಾದ ಸೋಶಿಯಲ್ ಡೆಮಾಕ್ರಟಿಕ್ ಸರಕಾರದಲ್ಲಿ ಪ್ರಧಾನಿಯಾಗಲು ಸಿದ್ದ ಎಂದು ಸುದ್ದಿಗೋಷ್ಟಿಯಲ್ಲಿ ಆ್ಯಂಡರ್ಸನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News