ಮುಂಬೈ ವಿಮಾನ ನಿಲ್ದಾಣದಲ್ಲಿ 3.7 ಕೋಟಿ ರೂ. ಮೌಲ್ಯದ ವಿದೇಶಿ ಕರೆನ್ಸಿ ವಶ

Update: 2021-11-26 16:11 GMT

ಹೊಸದಿಲ್ಲಿ: ಇಂದು ಬೆಳಗ್ಗೆ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಬ್ಬರು ಪ್ರಯಾಣಿಕರಿಂದ  3.7 ಕೋಟಿ ರೂ. ಮೌಲ್ಯದ ವಿದೇಶಿ ಕರೆನ್ಸಿ ವಶಪಡಿಸಿಕೊಳ್ಳಲಾಗಿದೆ. ಅವರ ಟ್ರ್ಯಾಲಿ ಬ್ಯಾಗ್‌ನಲ್ಲಿ ಬಚ್ಚಿಟ್ಟಿದ್ದ ಕರೆನ್ಸಿ ಪತ್ತೆಯಾಗಿದೆ. ಸಾಮಾನ್ಯ ಬ್ಯಾಗೇಜ್ ಸ್ಕ್ಯಾನ್‌ಗಳಲ್ಲಿ ಅದನ್ನು ಪತ್ತೆಹಚ್ಚಲು ಕಷ್ಟವಾಗುವಂತೆ ಅದನ್ನು ಮರೆಮಾಡಲಾಗಿದೆ ಎಂದು ಅಧಿಕಾರಿ ಹೇಳಿದರು.

ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್ ಐ) ತಡೆಹಿಡಿದ ನಂತರ ಅವರನ್ನು ಬಂಧಿಸಲಾಯಿತು.

ಶಾರ್ಜಾಕ್ಕೆ ತೆರಳಲು ಹೊರಟಿದ್ದ ವ್ಯಕ್ತಿಗಳ ಬಳಿ ವಶಪಡಿಸಿಕೊಂಡ ವಸ್ತುಗಳ ರಫ್ತಿಗೆ ಯಾವುದೇ ದಾಖಲೆಗಳು ಅಥವಾ ಪರವಾನಗಿ ಇರಲಿಲ್ಲ. ಅವರ ಬಳಿಯಿದ್ದ ಅಮೆರಿಕದ ಡಾಲರ್‌ ಹಾಗೂ ಸೌದಿ ದಿರ್ಹಾಮ್‌ನ ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ.

ದತ್ತಾಂಶ ವಿಶ್ಲೇಷಣೆಯನ್ನು ಬಳಸಿಕೊಂಡು ಡಿಆರ್‌ಐ ಅಧಿಕಾರಿಗಳು ಆಪರೇಷನ್ ಚೆಕ್ ಶರ್ಟ್‌ಗಳ ಅಡಿಯಲ್ಲಿ ಕರೆನ್ಸಿಯನ್ನು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News