ಮೆಲ್ಕಾರ್ ಮಹಿಳಾ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ

Update: 2021-11-26 17:35 GMT

ಬಿ.ಸಿ.ರೋಡ್ :  ಮೆಲ್ಕಾರ್ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜು ಇದರ ಜಂಟಿ ಆಶ್ರಯದಲ್ಲಿ ಭಾರತದ ಸಂವಿಧಾನ ದಿನಾಚರಣೆಯನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಬಿ. ಕೆ ಅಬ್ದುಲ್ ಲತೀಫ್ ಪ್ರತಿಜ್ಞಾ ವಿಧಿ ಬೋಧಿಸಿ ಭಾರತದ ಸಂವಿಧಾನದ ಮಹತ್ವವನ್ನು ತಿಳಿಸಿದರು.

ಉಪನ್ಯಾಸಕರುಗಳಾದ ವಿಜಯ, ಸೌಮ್ಯ, ಸುನೀತಾ ಪಿರೇರಾ, ಕಲಾವತಿ,  ಸಂಶುನ್ನಿಸ, ಮುಬೀನ, ಗಾಯತ್ರಿ, ಮಮತಾ ರಾವ್, ರಕ್ಷಿತಾ, ಗೀತಾ, ಎಂ. ಡಿ ಮಂಚಿ, ಮೊಹಮ್ಮದ್ ಶಿಹಾಬ್, ತೃಪ್ತಿ, ಅಶ್ವಿತಾ, ಮಿಶ್ರಿಯ, ಅಫ್ರೋಝ, ದೀಪ್ತಿ ಬಂಗೇರ ಹಾಗೂ ಬೋಧಕೇತರ ಸಿಬ್ಬಂದಿಗಳಾದ ಮೊಹಮ್ಮದ್ ನೌಶಾದ್, ಸುಹೈಲಾ, ಹರೀಣಾಕ್ಷಿ, ಗೀತಾ ಮೊದಲಾದವರು ಉಪಸ್ಥಿತರಿದ್ದರು.

ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯೋಜಕ, ಉಪನ್ಯಾಸಕ ಅಬ್ದುಲ್ ಮಜೀದ್. ಎಸ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News