ಜಮ್ಮು: ಗಡಿ ನುಸುಳುವ ಯತ್ನ; ಶಂಕಿತ ಉಗ್ರನ ಹತ್ಯೆ

Update: 2021-11-26 18:02 GMT

ಜಮ್ಮು, ನ. 26: ಜಮ್ಮು ಹಾಗೂ ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಶಂಕಿತ ಉಗ್ರನ ಒಳ ನುಸುಳುವ ಪ್ರಯತ್ನವನ್ನು ಸೇನೆ ವಿಫಲಗೊಳಿಸಿದೆ ಹಾಗೂ ಗುಂಡು ಹಾರಿಸಿ ಹತ್ಯೆಗೈದಿದೆ ಎಂದು ರಕ್ಷಣಾ ವಕ್ತಾರ ಶುಕ್ರವಾರ ತಿಳಿಸಿದ್ದಾರೆ.

ಬಿಂಬರ್ ಗಾಲಿಯ ಮುಂಚೂಣಿ ಪ್ರದೇಶದ ಗಡಿ ನಿಯಂತ್ರಣ ರೇಖೆಯಲ್ಲಿ ಗುರುವಾರ ರಾತ್ರಿ ಶಂಕಿತ ಉಗ್ರನ ಒಳ ನುಸುಳುವಿಕೆಯನ್ನು ಸೇನೆ ಗಮನಿಸಿತು ಎಂದು ಅವರು ತಿಳಿಸಿದ್ದಾರೆ.

  ಶಂಕಿತ ಉಗ್ರನ ಒಳನುಸುಳುವಿಕೆಯನ್ನು ವಿಫಲಗೊಳಿಸಲಾಗಿದೆ ಹಾಗೂ ಆತನನ್ನು ಹತ್ಯೆಗೈಯಲಾಗಿದೆ. ಶಂಕಿತ ಉಗ್ರನ ಮೃತದೇಹ ಹಾಗೂ ಶಸ್ತ್ರಾಸ್ತ್ರ, ಸ್ಫೋಟಕ ಕಾರ್ಯಾಚರಣೆ ನಡೆದ ಸ್ಥಳದಲ್ಲಿ ಪತ್ತೆಯಾಗಿದೆ. ಕಾರ್ಯಾಚರಣೆ ಮುಂದುವರಿದಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News