ಪ್ಯಾಟ್ ಕಮಿನ್ಸ್ ಆಸಿಸ್‌ನ ನೂತನ ಟೆಸ್ಟ್ ನಾಯಕ

Update: 2021-11-26 18:24 GMT
photo:twitter/@patcummins30

ಸಿಡ್ನಿ (ಆಸ್ಟ್ರೇಲಿಯ), ನ. 26: ಆ್ಯಶಸ್ ಸರಣಿಗೆ ಮುಂಚಿತವಾಗಿ, ಆಸ್ಟ್ರೇಲಿಯದ ಟೆಸ್ಟ್ ಕ್ರಿಕೆಟ್ ತಂಡದ ನಾಯಕನಾಗಿ ವೇಗಿ ಪ್ಯಾಟ್ ಕಮಿನ್ಸ್ ಮತ್ತು ಉಪ ನಾಯಕನಾಗಿ ಸ್ಟೀವ್ ಸ್ಮಿತ್‌ರನ್ನು ಶುಕ್ರವಾರ ನೇಮಿಸಲಾಗಿದೆ.

ಕ್ರಿಕೆಟ್ ಆಟಗಾರ್ತಿಯೊಬ್ಬರಿಗೆ ಅಶ್ಲೀಲ ಸಂದೇಶ ಕಳುಹಿಸಿದ ಹಗರಣದ ಹಿನ್ನೆಲೆಯಲ್ಲಿ ಕಳೆದ ವಾರ ಟಿಮ್ ಪೇನ್ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಬಳಿಕ ನೂತನ ನಾಯಕನನ್ನು ಆರಿಸಲಾಗಿದೆ.

ಪ್ಯಾಟ್ ಓರ್ವ ಪ್ರತಿಭಾವಂತ ಆಟಗಾರ ಹಾಗೂ ಮುಂದಾಳು. ಅವರು ಮೈದಾನದಲ್ಲಿಯೂ, ಮೈದಾನದ ಹೊರಗೂ ತನ್ನ ವ್ಯಕ್ತಿತ್ವ ಮತ್ತು ಸಾಧನೆಗಳಿಗಾಗಿ ತನ್ನ ಸಹ ಆಟಗಾರರು ಮತ್ತು ಕ್ರೀಡೆಗೆ ಸಂಬಂಧಿಸಿದ ಎಲ್ಲರಿಂದ ಗೌರವ ಪಡೆಯುತ್ತಿದ್ದಾರೆ’’ ಎಂದು ಕ್ರಿಕೆಟ್ ಆಸ್ಟ್ರೇಲಿಯ ಮುಖ್ಯಸ್ಥ ನಿಕ್ ಹಾಕ್‌ಲಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News