'ಸಂವಿಧಾನ ದಿನ': ಟಿಪ್ಪು ಸುಲ್ತಾನ್ ಫ್ಯಾನ್ಸ್ ಅಸೋಸಿಯೇಷನ್ ನಿಂದ ಕಿನ್ಯ ಗ್ರಾಪಂ ಗ್ರಂಥಾಲಯಕ್ಕೆ ಪುಸ್ತಕ ಕೊಡುಗೆ

Update: 2021-11-27 08:35 GMT

ಮಂಗಳೂರು, ನ.27: ಸಂವಿಧಾನ ದಿನದ ಅಂಗವಾಗಿ ಶುಕ್ರವಾರ ಕಿನ್ಯದ ಟಿಪ್ಪು ಸುಲ್ತಾನ್ ಫ್ಯಾನ್ಸ್ ಅಸೋಸಿಯೇಶನ್ ವತಿಯಿಂದ ಕಿನ್ಯ ಗ್ರಾಮ ಪಂಚಾಯತ್ ಡಿಜಿಟಲ್ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು. ಇದೇವೇಳೆ ಸಂವಿಧಾನದ ಪೀಠಿಕೆಯನ್ನು ಓದಿ ಪ್ರತಿಜ್ಞೆ ಸ್ವೀಕರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷ್ಮೀ, ಸದಸ್ಯರಾದ ಸೈಯದ್ ತ್ವಾಹಾ ತಂಙಳ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಿಶ್ವನಾಥ,  ಬಿ.ರಿಝ್ವಾನ್ ಕಿನ್ಯ, ಟಿಪ್ಪು ಸುಲ್ತಾನ್ ಫ್ಯಾನ್ಸ್ ಅಸೋಸಿಯೇಶನ್ ಅಧ್ಯಕ್ಷ ಮುಝಮ್ಮಿಲ್, ಗೌರವಾಧ್ಯಕ್ಷ ಇರ್ಷಾದ್, ಕೋಶಾಧಿಕರಿಗಳಾದ ನಾಸಿರ್, ಶಮೀತ್ ಮತ್ತು ಸದಸ್ಯರು ಹಾಗೂ ಪಂಚಾಯತ್ ಸಿಬ್ಬಂದಿ ಸೇರಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಮೇಲ್ವಿಚಾರಕಿ ಸೌಮ್ಯಾರಿಗೆ ಪುಸ್ತಕಗಳನ್ನು ಹಸ್ತಾಂತರ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News