ಅಲ್ ಸಲಾಮ ವುಮೆನ್ಸ್ ಶರೀಅತ್ ಸರ್ಟಿಫಿಕೆಟ್ ಕೋರ್ಸ್ ಸನದು ಪ್ರದಾನ

Update: 2021-11-27 10:59 GMT

ಮಂಗಳೂರು, ನ.27: ಶಂಸುಲ್ ಉಲಮಾ ಮೆಮೋರಿಯಲ್ ದಾರುಸ್ಸಲಾಂ ಅಕಾಡಮಿ ಮಂಗಳ ನಗರ ಇದರ ಆಶ್ರಯದಲ್ಲಿ ಅಲ್ ಅಮೀನ್ ಆನ್ ಲೈನ್ ಚಾನೆಲ್ ಮೂಲಕ ನಡೆಸಲಾದ ಅಲ್ ಸಲಾಮ ವುಮೆನ್ಸ್ ಶರೀಅತ್ ಸರ್ಟಿಫಿಕೆಟ್ ಕೋರ್ಸ್ ಸನದು ಪ್ರದಾನ ಕಾರ್ಯಕ್ರಮ ಜಮೀಯತುಲ್ ಫಲಾಹ್ ಆಡಿಟೋರಿಯಂ ನಲ್ಲಿ ಶನಿವಾರ ಜರುಗಿತು.

ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಕಾರ್ಯಕ್ರಮ ಉದ್ಘಾಟಿಸಿದರು.

 ತಬೂಕು ದಾರಿಮಿ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.

ವಿ.ಕೆ.ಅಬ್ದುಲ್ ಖಾದರ್ ಹಾಜಿ ದುಆ ನೆರವೇರಿಸಿದರು. ಎಸ್‌.ಬಿ.ಮುಹಮ್ಮದ್ ದಾರಿಮಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ವೇಳೆ 119 ವಿದ್ಯಾರ್ಥಿಗಳಿಗೆ ಸರ್ಟಿಫಿಕೆಟ್ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಮನ್ಸೂರ್ ಆಝಾದ್, ಅಬ್ದುಲ್ ಹಮೀದ್ ಹಾಜಿ, ಅಬ್ದುಲ್ಲತೀಫ್ ಪಳ್ಳಿಪ್ಪಾಡಿ, ಹನೀಫ್ ದಾರಿಮಿ, ಮುಹಮ್ಮದ್ ಅಲಿ ದಾರಿಮಿ, ಆಸಿಫ್ ಅಝ್ ಅರಿ, ಬಾವಾ ಮದನಿ ಬಾಂಬಿಲ ಮತ್ತಿತರರು ಉಪಸ್ಥಿತರಿದ್ದರು

ಸುಹೈಲ್ ಕಿರಾಅತ್ ಪಠಿಸಿದರು. ಅಬ್ದುಲ್ ಅಝೀಝ್ ದಾರಿಮಿ ಸ್ವಾಗತಿಸಿದರು. ಹನೀಫ್ ದಾರಿಮಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News