ಎಲ್ಲ ಪ್ರತಿಕೂಲಗಳನ್ನು ಮೆಟ್ಟಿ ನಿಂತು ಐಪಿಎಸ್ ಗೆ ಆಯ್ಕೆಯಾದ ಬುಶ್ರಾ ಬಾನು

Update: 2021-11-28 02:19 GMT
(Photo-National Herald)

ಫಿರೋಝಾಬಾದ್ : ವಿವಾಹವಾಗಿ 13 ವರ್ಷಗಳ ಬಳಿಕ, ನಾಲ್ಕು ಶಸ್ತ್ರಚಿಕಿತ್ಸೆಗಳಿಗೆ ಒಳಗಾದ ಎರಡು ಮಕ್ಕಳ ತಾಯಿ ಇತ್ತೀಚೆಗೆ ಭಾರತೀಯ ಪೊಲೀಸ್ ಸೇವೆ (ಐಪಿಎಸ್)ಗೆ ಆಯ್ಕೆಯಾಗಿದ್ದಾರೆ.

ಇದಕ್ಕೂ ಮುನ್ನ ಉತ್ತರ ಪ್ರದೇಶ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಇವರು, ಫಿರೋಝಾಬಾದ್ ನಲ್ಲಿ ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು.

2020ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 234ನೇ ರ‍್ಯಾಂಕ್ ಪಡೆದ ಬುಶ್ರಾ ಅರ್ಷದ್ ಬಾನು, ಐಪಿಎಸ್‌ಗೆ ಆಯ್ಕೆಯಾಗಿದ್ದಾರೆ. ಇದಕ್ಕೂ ಮೊದಲು ಭಾರತೀಯ ಕಂದಾಯ ಸೇವೆಗೂ ಇವರು ಆಯ್ಕೆಯಾಗಿದ್ದಾರೆ. ಆದರೆ ಅವರ ಹೃದಯಕ್ಕೆ ಆಪ್ತವಾಗಿರುವ ಹುದ್ದೆಯೆಂದರೆ ಐಪಿಎಸ್. ಕುಟುಂಬದಲ್ಲಿ ಹಠಮಾರಿ ಎಂದು ಕರೆಸಿಕೊಳ್ಳುವ ಬಾನು, ನಾಗರಿಕ ಸೇವಾ ಪರೀಕ್ಷೆಗೆ ಸಜ್ಜಾಗಿದ್ದನ್ನು ನೆನೆಸಿಕೊಳ್ಳುತ್ತಾರೆ. ಯಾವುದೇ ಕೋಚಿಂಗ್ ಸಂಸ್ಥೆಗಳ ನೆರವಿಲ್ಲದೇ ಈ ಸಾಧನೆ ಮಾಡಿದ ಕೀರ್ತಿ ಇವರದ್ದು.

17 ವಯಸ್ಸಿನಲ್ಲೇ ಕಾನ್ಪುರದಲ್ಲಿ ಪದವಿ ಪಡೆದ ಇವರು 20ನೇ ವಯಸ್ಸಿಗೆ ಎಂಬಿಎ ಪದವಿ ಪಡೆದಿದ್ದರು. ಎಂಜಿನಿಯರ್‌ ನನ್ನು ವಿವಾಹವಾದ ಬಳಿಕ ಪತಿ ಅಸ್ಮರ್ ಹುಸೇನ್ ಎಂಜಿನಿಯರಿಂಗ್ ಕಾಲೇಜು ಪ್ರಾಧ್ಯಾಪಕರಾಗಿ ಸೌದಿ ಅರೇಬಿಯಾಗೆ ತೆರಳಿದರು. ಬಾನು ಕೂಡಾ ಕಾರ್ಪೊರೇಟ್ ಉದ್ಯೋಗದಲ್ಲಿದ್ದರೂ, ಇಬ್ಬರೂ ಸ್ವದೇಶಕ್ಕೆ ಮರಳಲು ನಿರ್ಧರಿಸಿದರು.

ಬಾನು ಬಾಲ್ಯದಲ್ಲೇ ಸ್ಮಾರ್ಟ್ ಆಗಿದ್ದನ್ನು ಕಂಡ ಎಲ್ಲರೂ, ಆಕೆ ಕಲೆಕ್ಟರ್ ಆಗುತ್ತಾರೆ ಎಂದು ಪೋಷಕರ ಬಳಿಕ ಹೇಳುತ್ತಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ. ಇದು ಅವರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News