ಕಾರ್ಕಳ: ಮನೆಯಲ್ಲೇ ಹೆರಿಗೆ ಮಾಡಿಸಿದ ಆ್ಯಂಬುಲೆನ್ಸ್ ಸಿಬ್ಬಂದಿ !

Update: 2021-11-28 16:22 GMT

ಕಾರ್ಕಳ, ನ.28: ಮನೆ ಸಾಗಲು ಸರಿಯಾದ ದಾರಿ ಇಲ್ಲದ ಕಾರಣ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಗೆ ಆ್ಯಂಬುಲೆನ್ಸ್ ಸಿಬ್ಬಂದಿ ಮನೆಯಲ್ಲಿಯೇ ಹೆರಿಗೆ ಮಾಡಿಸಿರುವ ಘಟನೆ ನ. 27ರಂದು ನಿಟ್ಟೆಯಲ್ಲಿ ನಡೆದಿದೆ.

ಗೀತಾ ಎಂಬವರು ಹೆರಿಗೆ ನೋವಿನಿಂದ ಬಳಲುತ್ತಿದ್ದು, ಈ ಬಗ್ಗೆ ಮಾಹಿತಿ ತಿಳಿದು 108 ಆ್ಯಂಬುಲೆನ್ಸ್ ಸ್ಥಳಕ್ಕೆ ಆಗಮಿಸಿತು. ಗರ್ಭಿಣಿಯ ಮನೆ ಹೆದ್ದಾರಿಯಿಂದ ಸುಮಾರು ಒಂದು ಕಿ.ಮೀ. ದೂರ ಇದ್ದು ಆ್ಯಂಬುಲೆನ್ಸ್ ಮನೆಯ ಬಳಿ ಹೋಗಲು ಸರಿಯಾದ ದಾರಿ ವ್ಯವಸ್ಥೆ ಇರಲಿಲ್ಲ. ಆದುದರಿಂದ ಆ್ಯಂಬುಲೆನ್ಸ್ ನ್ನು ಹೆದ್ದಾರಿಯಲ್ಲಿಯೇ ನಿಲ್ಲಿಸಿದ ಸಿಬ್ಬಂದಿ, ಗರ್ಭಿಣಿ ಮನೆಗೆ ನಡೆದುಕೊಂಡೇ ತೆರಳಿದರು. ಬಳಿಕ ಅಲ್ಲಿ  ಸಿಬ್ಬಂದಿ ರಾಧಾಮಣಿ ಹಾಗೂ ಪುಂಡಲಿಕ, ಗೀತಾ ಅವರಿಗೆ ಮನೆಯಲ್ಲಿಯೇ ಹೆರಿಗೆ ಮಾಡಿಸಿದರು. ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದು ಇವರನ್ನು  ಆ್ಯಂಬುಲೆನ್ಸ್ ನಲ್ಲಿ ಕಾರ್ಕಳ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News