ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ರಾಜೀನಾಮೆ ನೀಡಿದ್ದ ಮ್ಯಾಗ್ಡಲೀನಾ ಮತ್ತೆ ಸ್ವೀಡನ್ ಪ್ರಧಾನಿಯಾಗಿ ನೇಮಕ

Update: 2021-11-29 17:50 GMT
ಮ್ಯಾಗ್ದಲಿನಾ ಆ್ಯಂಡರ್ಸನ್ (Photo: Twitter/@swedense)

ಸ್ಟಾಕ್ ಹೋಮ್: ಸ್ವೀಡನ್‌ನ ಮೊದಲ ಮಹಿಳಾ ಪ್ರಧಾನ ಮಂತ್ರಿ ಎಂಬ ಹಿರಿಮೆಗೆ ಪಾತ್ರರಾಗಿದ್ದ ಮ್ಯಾಗ್ಡಲೀನಾ ಆ್ಯಂಡರ್ಸನ್ ಕಳೆದ ವಾರ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ರಾಜಕೀಯ ಪ್ರಕ್ಷುಬ್ಧತೆಯಿಂದಾಗಿ ರಾಜೀನಾಮೆ ನೀಡಿದ್ದು ಇದೀಗ ಉನ್ನತ ಹುದ್ದೆಗೆ ಮರುನೇಮಕಗೊಂಡಿದ್ದಾರೆ.

ಸೋಮವಾರ ನಡೆದ ಹೊಸ ಮತದಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಕ್ಷದ ನಾಯಕಿ ಮ್ಯಾಗ್ಡಲೀನಾ ಆ್ಯಂಡರ್ಸನ್ ಅವರನ್ನು ಸಂಸದರು ಕಡಿಮೆ ಅಂತರದಿಂದ ಬೆಂಬಲಿಸಿದ್ದಾರೆ.

ಮುಂದಿನ ವರ್ಷ ಸೆಪ್ಟೆಂಬರ್‌ನಲ್ಲಿ ಚುನಾವಣೆ ನಡೆಯುವವರೆಗೆ ಅವರು ಏಕಪಕ್ಷ ಸರಕಾರವನ್ನು ಮುನ್ನಡೆಸಲು ಪ್ರಯತ್ನಿಸುತ್ತಾರೆ.

ಕಳೆದ ಬುಧವಾರ ಅವರ ಸಮ್ಮಿಶ್ರ ಸರಕಾರ ಪತನದ ನಂತರ ಅವರು ಪ್ರಧಾನಿ ಹುದ್ದೆಯಿಂದ ಕೆಳಗಿಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News