ವ್ಯಾಕ್ಸಿನ್ ಕಡ್ಡಾಯ ಕಾರಣಕ್ಕೆ ಆಸ್ಟ್ರೇಲಿಯನ್ ಓಪನ್‌ನಿಂದ ಜೊಕೊವಿಕ್ ಹೊರಕ್ಕೆ?

Update: 2021-11-29 18:11 GMT
photo:PTI

ಮೆಲ್ಬೋರ್ನ್, ನ.29: ಕೋವಿಡ್-19 ವ್ಯಾಕ್ಸಿನೇಶನ್ ನಿಯಮಗಳಲ್ಲಿ ಸಡಿಲಿಕೆ ಇರದಿದ್ದರೆ ನೊವಾಕ್ ಜೊಕೊವಿಕ್ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡುವ ಸಾಧ್ಯತೆ ಇಲ್ಲ ಎಂದು ವಿಶ್ವದ ನಂ.1 ಆಟಗಾರನ ತಂದೆ ಸ್ರಿಡ್ಜಾನ್ ಜೊಕೊವಿಕ್ ಹೇಳಿದ್ದಾರೆ.

ಟೂರ್ನಿಯಲ್ಲಿ ಭಾಗವಹಿಸುವ ಎಲ್ಲ ಆಟಗಾರರು ಲಸಿಕೆ ಸ್ವೀಕರಿಸಿರಬೇಕು ಎಂದು ವರ್ಷದ ಮೊದಲ ಗ್ರಾನ್‌ಸ್ಲಾಮ್ ಆಯೋಜಕರು ಹೇಳಿದ್ದಾರೆ.

ತಾನು ಲಸಿಕೆ ಸ್ವೀಕರಿಸಿದ್ದೇನೆಯೇ ಎಂಬುದನ್ನು ಬಹಿರಂಗಪಡಿಸಲು ಜೊಕೊವಿಕ್ ನಿರಾಕರಿಸಿದ್ದಾರೆ. ‘‘ಆಟಗಾರರಿಗೆ ಲಸಿಕೆ ಹಾಕುವ ಬಗ್ಗೆ ಟೆನಿಸ್ ಆಸ್ಟ್ರೇಲಿಯದ ಆಡಳಿತ ಮಂಡಳಿಯ ನಿಲುವು ಬ್ಲಾಕ್‌ಮೇಲ್‌ಗೆ ಸಮಾನವಾಗಿದೆ. ನಾವು ಲಸಿಕೆ ಹಾಕುತ್ತೇವೆಯೇ ಅಥವಾ ಇಲ್ಲವೇ ಎಂಬುದು ನಮ್ಮ ಪ್ರತಿಯೊಬ್ಬರ ವೈಯಕ್ತಿಕ ಹಕ್ಕು. ನಮ್ಮ ಅಂತರ್ಗತ ವಿಚಾರಕ್ಕೆ ಪ್ರವೇಶಿಸಲು ಯಾರಿಗೂ ಹಕ್ಕಿಲ್ಲ. ಈ ಬ್ಲಾಕ್‌ಮೇಲ್‌ಗಳು ಹಾಗೂ ಷರತ್ತುಗಳ ಅಡಿಯಲ್ಲಿ ಜೊಕೊವಿಕ್ ಬಹುಶಃ ಆಡುವುದಿಲ್ಲ. ನಾನು ಹಾಗೆ ಮಾಡುವುದಿಲ್ಲ. ಅವನು ನನ್ನ ಮಗ.

ಹೀಗಾಗಿ ನೀವೇ ನಿರ್ಧರಿಸಿ’’ ಎಂದು ಜೊಕೊವಿಕ್ ತಂದೆ ಸರ್ಬಿಯಾ ಟಿವಿಗೆ ತಿಳಿಸಿದ್ದಾರೆ. ಜೊಕೊವಿಕ್ ಈ ವರ್ಷದ ಟೂರ್ನಿ ಸೇರಿದಂತೆ ಮೆಲ್ಬೋರ್ನ್ ಪಾರ್ಕ್‌ನಲ್ಲಿ ಈ ತನಕ 9 ಗ್ರಾನ್‌ಸ್ಲಾಮ್ ಕಿರೀಟಗಳನ್ನು ಗೆದ್ದುಕೊಂಡಿದ್ದಾರೆ. ಫೆಡರರ್ ಹಾಗೂ ರಫೆಲ್ ನಡಾಲ್ ಅವರೊಂದಿಗೆ 20 ಗ್ರಾನ್‌ಸ್ಲಾಮ್ ಪ್ರಶಸ್ತಿಯ ದಾಖಲೆಯನ್ನು ಹಂಚಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News