ಅಪಾಯಕಾರಿ ಹೊಂಡ ಮುಚ್ಚಿ

Update: 2021-11-30 18:17 GMT

ಮಾನ್ಯರೇ,

ಪರ್ಯಾಯ ಪೂರ್ವಭಾವಿಯಾಗಿ ಏಳು ಕೋಟಿ ರೂ. ವೆಚ್ಚದಲ್ಲಿ ಉಡುಪಿಯ ರಸ್ತೆ ದುರಸ್ತಿ ಮಾಡುವ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿರುವುದು ಸಂತೋಷದ ಸುದ್ದಿ
ಉಡುಪಿಯ ಮುದ್ದಣ ಮಾರ್ಗ ಪರ್ಯಾಯ ಮೆರವಣಿಗೆ ಬರುವ ರಸ್ತೆ. ಅದರ ಬದಿಯಲ್ಲಿ ಹೊಸ ಆಸ್ಪತ್ರೆ ಕಟ್ಟಡ ನಿರ್ಮಿಸಲು ಮಾಡಿರುವ ದೊಡ್ಡ ಹೊಂಡ ಅಪಾಯಕಾರಿಯಾಗಿದೆ. ಈಗಾಗಲೇ ಪಕ್ಕದ ಚಿತ್ತರಂಜನ್ ಬಿಲ್ಡಿಂಗ್ ಕುಸಿದಿದೆ. ಮುದ್ದಣ ಮಾರ್ಗದಲ್ಲಿ ಸ್ವಲ್ಪಭೂ ಕುಸಿತವಾದರೂ ದೊಡ್ಡ ಸಮಸ್ಯೆ ಆಗುತ್ತದೆ. ಆಸ್ಪತ್ರೆ ನಿರ್ಮಿಸಲು ಹೊರಟ ಕಂಪೆನಿ ತನ್ನ ನೌಕರರಿಗೆ ಸಂಬಳ ಕೊಡಲು ಸಾಧ್ಯ ಇಲ್ಲದ ಸ್ಥಿತಿಯಲ್ಲಿ ಇದೆ. ಇನ್ನು ಐದು ವರ್ಷ ಕಾದರೂ ಆ ಕಂಪೆನಿ ಆಸ್ಪತ್ರೆ ನಿರ್ಮಿಸುವ ಭರವಸೆ ಇಲ್ಲ.
       ಆದ್ದರಿಂದ ಪರ್ಯಾಯ ಪೂರ್ವಭಾವಿ ಕಾಮಗಾರಿಯಲ್ಲಿ ಈ ಹೊಂಡ ಮುಚ್ಚುವುದು ಅಗತ್ಯ ಅನಿಸುತ್ತದೆ. ಇದರಿಂದ ಮುದ್ದಣ ಮಾರ್ಗದ ಅಪಾಯವನ್ನು, ಹೊಂಡವು ಸೊಳ್ಳೆ ಉತ್ಪಾದನೆ ಕೇಂದ್ರವಾಗುವುದನ್ನು ತಪ್ಪಿಸಬಹುದು.
 ಉಡುಪಿ ನಗರ ಸಭೆಯವರು, ಮಾನ್ಯ ಶಾಸಕರು, ಜಿಲ್ಲಾಧಿಕಾರಿಯವರು ಈ ಬಗ್ಗೆ ತುರ್ತು ನಿರ್ಧಾರ ಮಾಡಬೇಕಾಗಿದೆ.
   ಹಾಗೆಯೇ ಉಡುಪಿ ಜಿಲ್ಲೆಯ ಎಲ್ಲ ಶಾಸಕರು, ಮಾನ್ಯ ಸಚಿವರು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿ ಸರಕಾರವು ಆಸ್ಪತ್ರೆಯ ಆಡಳಿತದ ಖಾಸಗಿ ಕಂಪೆನಿ ಜೊತೆ ಮಾಡಿ ಕೊಂಡ ಒಪ್ಪಂದವನ್ನು ರದ್ದುಗೊಳಿಸಲು ಇದು ಸಕಾಲ. ಇದರಿಂದ ಹಿಂದಿನ ಸರಕಾರ ಮಾಡಿದ ಬೇಜವಾಬ್ದಾರಿ ನಿರ್ಧಾರವನ್ನು ಜನಪರವಾಗಿ ಸರಿಪಡಿಸಿದಂತೆ ಆಗುತ್ತದೆ
 

Similar News