ಬಿಹಾರದ ವಿಧಾನಸಭಾ ಆವರಣದಲ್ಲಿ ಖಾಲಿ ಮದ್ಯದ ಬಾಟಲಿ ಪತ್ತೆ: ಸರಕಾರದ ವಿರುದ್ಧ ತೇಜಸ್ವಿ ಯಾದವ್ ಕಿಡಿ

Update: 2021-12-01 07:16 GMT
ತೇಜಸ್ವಿ ಯಾದವ್

ಪಾಟ್ನಾ: ಬಿಹಾರದ ವಿಧಾನಸಭಾ ಆವರಣದಲ್ಲಿ ಖಾಲಿ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡಿರುವ ಬಗ್ಗೆ ಆಡಳಿತಾರೂಢ ಜೆಡಿಯು-ಬಿಜೆಪಿ ಸರಕಾರದ ವಿರುದ್ಧ ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ವಾಗ್ದಾಳಿ ನಡೆಸಿದರು.

ಸ್ಥಳಕ್ಕೆ ಭೇಟಿ ನೀಡಿ ಛಾಯಾಚಿತ್ರಗಳನ್ನು ತೆಗೆದ ಯಾದವ್ ಅವರ ಸವಾಲನ್ನು ಎದುರಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್  ಮದ್ಯದ ಬಾಟಲಿಗಳ ಪತ್ತೆಯನ್ನು ತನಿಖೆಗೆ ಒಳಪಡಿಸುವುದಾಗಿ ಹೇಳಿದರು.

‘‘ಇದು ಬಹಳ ದೊಡ್ಡ ವಿಚಾರ. ವಿಧಾನಸಭೆ ಆವರಣದಲ್ಲಿ ಮದ್ಯದ ಬಾಟಲಿ ಇದ್ದರೆ ಮುಖ್ಯಮಂತ್ರಿ ಹುದ್ದೆಯಲ್ಲಿರಲು ಅವರಿಗೆ ನೈತಿಕ ಜವಾಬ್ದಾರಿ ಇಲ್ಲವೇ, ಇದಕ್ಕೆ ಯಾರು ಹೊಣೆ. ಕೋಕಾಕೋಲಾ ಬಾಟಲಿಗಳು (ಅದೂ ಕೂಡ) ಇದ್ದವು. ಬಿಹಾರದ ಗೃಹ ಸಚಿವರು ನಿದ್ರಿಸುತ್ತಿದ್ದಾರಾ? ಎಂದು ಆರ್‌ಜೆಡಿ ನಾಯಕ ಪ್ರಶ್ನಿಸಿದ್ದಾರೆ.

ಈ ಸ್ಥಳವು ಮುಖ್ಯಮಂತ್ರಿಗಳ ಕೊಠಡಿಯಿಂದ 100 ಮೀಟರ್‌ಗಿಂತಲೂ ಕಡಿಮೆ ದೂರದಲ್ಲಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News